ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Friday, December 17, 2010

ಕಳೆದು ಹೋದ ಹೊಸ ಮನೆ ಬೀಗದಕೈ

...... ರಾತ್ರಿ ಊಟಾ ಆದ ಮೇಲೆ ಮಲಕ್ಕೊಳ್ಳೋಕೆ ಹೋಗೋವಾಗ ಬೀಗದಕೈ ತಿರುಗಿಸಿಕೊಂಡು ಹೋಗಿ ಕಳೆದುಕೊಂಡೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ವನವಾಸ ಪಟ್ಟುಗೊಂಡು ಮಲಗಿದ್ದಾಯ್ತು. ಬೆ
ಳಿಗ್ಗೆ ಎದ್ದವನೇ ಹೋಗಿ ಬೇರೆ ಬೀಗದಕೈಲಿ Try ಮಾಡಿದೆ, ಬರಲಿಲ್ಲ. ಮಲ್ಲೇಶ್ವರಕ್ಕೆ ಹೋಗಿ, ಬೀಗ ರಿಪೇರಿಯವರನ್ನು ವಿಚಾರಿಸಿದೆ. 1 1/2 ರೂ. ಕೇಳಿದ. ಅಳೆದೂ, ಸುರಿದೂ ಕರಕೊಂಡು ಬಂದೆ. ಆ ಹೊತ್ತಿಗೆ ಬೀಗದಕೈ ಸಿಕ್ಕಿಬಿಟ್ಟಿತ್ತು. ಅವನಿಗೆ 8 ಆ. ಕೊಡೋ ತನಕ ಬಿಡಲಿಲ್ಲ. .....

16 ಮಾರ್ಚ್ 1946

ಬೆಳಿಗ್ಗೆ ವಾಸುದೇವರಾವ್ Phone ಮಾಡಿ ದುಡ್ಡು ಕೇಳಿದರು, ಕೊಡ್ತೀನೆಂದೆ. ಸ್ವಲ್ಪ ಹೊತ್ಗೇ Manager ಕೂಗಿದ್ರು. ಈ ಸಾರಿ Allowance ಅಂತ ಹೇಳಿ ಇನ್ನೈದು ರೂ. ಕೊಟ್ಟಿದ್ದಾರೆ. ಕಾಫಿ ಕೊಡ್ಸಿ ಚಿಲ್ಲರೆ ಮಾಡ್ಸಿದೆ. ವಾಸುದೇವರಾವ್‍ಗೆ 2 ರೂ. ಕೊಟ್ಟೆ. Driverಗೆ ಲಾಟರಿ ಬಾಬ್ತು ಎಂಟಾಣೆ ಕೊಟ್ಟೆ. ಸಂಜೆ ಹೊಸ Formನಲ್ಲಿ Details Fill up ಮಾಡಿಸಿಕೊಂಡ್ರು. ಎ.ಸುಂದರರಾಜಾರಾಯರ Death News Receive ಮಾಡಿದೆ.

10 ನಿ. Typeಗೆ ಹೋಗಿದ್ದೆ. ಇವತ್ತು Narayan ಬಂದಿಲ್ಲ.

ಸಂಜೆ ಸೀನನಿಗೆ ವಡೆ, ಕಾಫಿ ಕೊಡ್ಸಿದೆ. ಅಶ್ವಥ್ಥಣ್ಣನ ಮನೆಗೆ ಹೋಗಿದ್ದೆ. ವಾಸು ಸಿಕ್ಕಿದ್ದ.

17 ಮಾರ್ಚ್ 1946

ಅಕ್ಕನಿಗೆ ಕೊಡಬೇಕಾದ 20 ರೂ. ಕೊಟ್ಟುಬಿಟ್ಟೆ. ಸೀದಾ ಸ್ಟೇಷನ್ನಿಗೆ ಹೋದೆ. ದಾರಿ ಉದ್ದಕ್ಕೂ ಬಣ್ಣದ ಕಾಟ. ಹೋದ ತಕ್ಷಣ ಬಸ್ ಬಂತು. ಬರ್ತಾ ದಾರೀಲಿ ಆಫೀಸಿನ ರಾಮಾಚಾರ್ ಸಿಕ್ರು, ಮಾತಾಡ್ಸ್ಲಿಲ್ಲ. ಅಂಬಾಭವನ್‍ನಲ್ಲಿ ದೋಸೆ, ಕಾಫಿ. ಅಲ್ಲಿಂದ ಗುಂಡನ ಮನೆಗೆ ಬಂದೆ. ರಾಮಾಚಾರ್ರಿಗೆ ಮೈಗೆ ಚೆನ್ನಾಗಿಲ್ಲ. ಮತಿಘಟ್ಟ ಕೃ. ಮೂರ್ತಿ ಮನೇಗೆ ಹೋಗ್ತೀಯಾಂದ್ರು, ಸುಮ್ಮನಿದ್ದೆ. ಗುಂಡ Doctor Shopಗೆ ಕರ್ಕೊಂಡು ಹೋದ.

ಕಾಮನಹಬ್ಬದ ಗಲಾಟೆ ಪ್ರಯುಕ್ತ ಸಂಜೆ ತನಕ ಚಲಿಸಲೇ ಇಲ್ಲ. ಮನೇಲಿ ಕೂತು ಪಟಗಳಿಗೆ ಕಟ್ಟು ಹಾಕಿದೆ. ಅಮೃತೂರಿಗೆ, ತುಮಕೂರಿಗೆ ಭಾವ ಕಾಗದ ಬರೆಸಿದರು. ಸಂಜೆ Reading Roomಗೆ ಹೋಗಿ ಬಂದೆ. ರಾತ್ರಿ ಊಟಾ ಆದ ಮೇಲೆ ಮಲಕ್ಕೊಳ್ಳೋಕೆ ಹೋಗೋವಾಗ ಬೀಗದಕೈ ತಿರುಗಿಸಿಕೊಂಡು ಹೋಗಿ ಕಳೆದುಕೊಂಡೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ವನವಾಸ ಪಟ್ಟುಗೊಂಡು ಮಲಗಿದ್ದಾಯ್ತು. ಭಾವ 5 ರೂ. ಈಸಿಕೊಂಡು ಹೋದರು. ನಾಳೆ ಅಮ್ಮಾವ್ರು ಬರ್ತಾರಂತೆ.

18 ಮಾರ್ಚ್ 1946

ಬೆಳಿಗ್ಗೆ ಎದ್ದವನೇ ಹೋಗಿ ಬೇರೆ ಬೀಗದಕೈಲಿ Try ಮಾಡಿದೆ, ಬರಲಿಲ್ಲ. ಮಲ್ಲೇಶ್ವರಕ್ಕೆ ಹೋಗಿ, ಬೀಗ ರಿಪೇರಿಯವರನ್ನು ವಿಚಾರಿಸಿದೆ. 1 1/2 ರೂ. ಕೇಳಿದ. ಅಳೆದೂ, ಸುರಿದೂ ಕರಕೊಂಡು ಬಂದೆ. ಆ ಹೊತ್ತಿಗೆ ಬೀಗದಕೈ ಸಿಕ್ಕಿಬಿಟ್ಟಿತ್ತು. ಅವನಿಗೆ 8 ಆ. ಕೊಡೋ ತನಕ ಬಿಡಲಿಲ್ಲ. ಆಮೇಲೆ ರಾಘವನ ಮನೆಗೆ ಹೋದೆ. ಅವನಿಗೆ ಅವನ 3 ರೂ. ಕೊಟ್ಟೆ.

JAIHIND ತಂದೆ. ಗುಂಡನಿಗೆ ಪೇಪರ್ ಬೇಕೂಂದಿದ್ದ. ನಾನು ಇಲ್ಲಾಂದೆ. ಅವನೂ ಸರಿಯೇ ಆಯ್ತು ಅಂದ. ತಂಗಳನ್ನ ಊಟ ಮಾಡಿ ಹೊರಟೆ. Officeಗೆ ಹೋದಾಗ 11 1/2 ಆಗಿತ್ತು.

Proprietor, Weeklyಗೆ Science Articles ಬರೀರೀಂತ ಹೇಳಿದ್ರು. ಆಗ್ಲೀಂದೆ. ಕೆಲವು Interesting Articles Translate ಮಾಡಿದೆ.

5 ರೂ. ಮುರಿಸಿದೆ. ಸಂಜೆ 5 ಗಂಟೇ ಹೊತ್ತಿಗಾಗಲೇ ಹೊರಟು ಬಂದು Stationಗೆ ಹೋದೆ. ದಾರೀಲಿ `ದೇಶಬಂಧು'ಗೆ Article Post ಮಾಡಿದೆ. 1 ಗಂ. ಕಾದ ಮೇಲೆ ಅಮ್ಮನ ಬಸ್ ಬಂತು. ದಾರೀಲಿ ಬೇರೆ 1 ಗಂ. ಆಯ್ತು. 3ನೇ ಕ್ರಾಸ್ ಹತ್ರ ಇಳಿದು ಸಾಮಾನು ತಂದೆವು.

19 ಮಾರ್ಚ್ 1946

ಕೆಲವು ಪಟಗಳನ್ನು ಜೋಡಿಸಿದೆ. ಸಂಜೆ ವಾಸೂ ಸಿಕ್ಕಿದ್ದ. ಕಾಫೀ ಕೊಡೀಸ್ತೀನೀಂದೆ. ಬರ್ಲಿಲ್ಲ.

20 ಮಾರ್ಚ್ 1946

ಮಧ್ಯಾಹ್ನ ವ್ಯಾಸರಾಯ್ರು ಬಲಾತ್ಕಾರದಿಂದ ಮಜ್ಜಿಗೆ ಕೊಡಿಸಿದ್ರು. ರಾತ್ರಿ ಮನೇಗೆ ಬರೋ ಹೊತ್ಗೆ ಅಮ್ಮಾವ್ರು ಮನೇಲಿರ್ಲಿಲ್ಲ. ರಾಘೂ ಕಾಗದ ಬರೆದಿದ್ದಾನೆ, ತಲುಪಿದ್ದಕ್ಕೆ. ಸಂಜೆ ಭಾವನೆದುರಿಗೆ ಮನೆಯೋಳು ಬಾಡಿಗೆ ಕೇಳಿದಳು.

21 ಮಾರ್ಚ್ 1946

ಕಾಫಿ ಕುಡಿಯದೆ ಹೊರಟಾಗ ಸೋಮ ಸಿಕ್ಕು Juice ಕೊಡಿಸಿದ. ಆಮೇಲೆ ಸಂಪತ್ತು ಬಂದಿದ್ದ. ಸಂಜೆ ಅವನ ಜತೇಲಿ ಕಾಫಿ, walking. Cubbon Park ಎಲ್ಲಾ ಸುತ್ತು ಹಾಕಿದ್ದಾಯ್ತು. ಅವನ ಜತೆ ಮತ್ತೆ ಕಾಫಿ. ಸೀನ ಸಿಗಲಿಲ್ಲ. ರಾತ್ರಿ ಮಳೇ ಬಂತು. ಸಿಟೀ ಬಸ್ಸಲ್ಲಿ ಬಂದ್ರೂ ಸಿಕ್ಕಿ ಹಾಕಿಕೊಂಡೆ. ಶೇಷಾದ್ರಿಪುರಕ್ಕೆ ಬಂದ ಮೇಲೆ ಪೂರಾ ನೆನೆದೆ, ಮೋರಿ ತುಂಬಿ ಹರೀತಿತ್ತು. ರಾಯರ ಗುಡಿ ಹತ್ರ ಬರೋ ಹೊತ್ತಿಗೆ ಪೂರ್ತಿ ಒದ್ದೆ ಮುದ್ದೆ ಆದೆ. ಭಾವ ಬಂದಿದ್ರು. ಅವ್ರೂ, ನಾನೂ, ಸೀನಣ್ಣ ಹೋಗಿ ಹೊಸ ಮನೇಲಿ ಮಲಗಿದೆವು. ಈ ಮಳೇಲೇನಾದ್ರೂ ಅಮ್ಮ ಬಂದು ಮಳೇಗೆ ಸಿಕ್ಕಿದ್ರೆ ಗತಿ ಏನೂಂತ ಬಹಳ ಪೇಚಾಟ ಆಯ್ತು. ರಾಘೂ ಇಂದ ಇವತ್ತು ಕಾಗದ ಬಂದಿದೆ.


No comments: