ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Saturday, December 18, 2010

ಸಂಕಷ್ಟಗಳೇ ಹೀಗೆ, ಒಂದರ ನಂತರ ಮತ್ತೊಂದು ....

..... ನಾಗೇಶರಾವ್ ಅವರಿಗಿಂತಲೂ ಐದು ವರ್ಷ ಚಿಕ್ಕವಳಾದ ತಂಗಿ ಜಾನಕಿ (ಜಾನೂ)ಗೆ 12 ವರ್ಷಕ್ಕೇ ಮದುವೆ! ಆ ಮದುವೆಯ ಸಂದರ್ಭದಲ್ಲೇ ನಾಗೇಶರಾವ್‍ಗೆ ಉಪನಯನವಾಗಿರುತ್ತದೆ. 13-14 ವರ್ಷದ ಹುಡುಗಿ ಪುಟ್ಟ ಕಂದಮ್ಮನನ್ನು ಹೆತ್ತ ಕೆಲವೇ ತಿಂಗಳಲ್ಲಿ ಅ
ನಾರೋಗ್ಯದಿಂದ
ಗಂಡ ತೀರಿಕೊಳ್ತಾರೆ. ಬೆಂಗಳೂರಿನಲ್ಲಿ ನೆಲೆ ಹೂಡಬೇಕೆಂಬ ಹಂಬಲದಿಂದ ತಿಂ
ಗಳಿಗೆ ಹತ್ತು ರೂಪಾಯಿ ಬಾಡಿಗೆಯ ಹೂವಮ್ಮನ ವಠಾರದ ಮನೆಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಈ ಸುದ್ದಿ.
ಎದ್ದೆನೋ, ಬಿದ್ದೆನೋ ಎಂದು ಊರಿಗೆ ಹೋಗಿ, ಆ ಪರಿಸ್ಥಿತಿಯನ್ನು ನಿಭಾಯಿಸಲು ನಾಗೇಶರಾವ್
ಹೆಣಗಾಡುತ್ತಾರೆ. ......



22 ಮಾರ್ಚ್ 1946


ಬೆಳಿಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆಯೇ ಎದ್ದೆ. ಎಷ್ಟೊತ್ತಾದ್ರೂ ವಾಸೂ ಆಗಲೀ, ಯಾರೇ ಆಗಲಿ ಬರ್ಲಿಲ್ಲ. ಭಾವ ನನ್ ಕಳ್ಸಿದ್ರು. ಕಾಫಿ ಕುಡಿದು ಸಿಟಿ ಬಸ್ನಲ್ಲಿ ಹೋಗಿ, ಸಿಟಿ ಬಸ್ನಲ್ಲಿ ಬಂದೆ. ಉಪ್ಪಿಟ್ಟು ತಿಂದು ಆಫೀಸಿಗೆ ಹೋದೆ. ಸೀನಾ ಬಂದಿದ್ದ. ಮರೆತು ಬೀಗದಕೈ ತೆಗೆದುಕೊಂಡು ಹೋಗಿದ್ರಿಂದ ಪ್ರಮಾದವೇ ಆಯ್ತು. ರಂಗಣ್ಣ ತುಮ್ಕೂರಿಂದ ಬಂದಿದ್ದ. ಹನುಮಂತರಾಯನ್ನ ಆಸ್ಪತ್ರೆಗೆ ಸೇರಿಸಿದಾರಂತೆ [ನಾಗೇಶರಾವ್ ತಂಗಿ ಜಾನೂ ಗಂಡ]. ನನಗೆ ಬಹಳ ಹೆದರಿಕೆಯಾಯಿತು. ಭಾವ ಹೋಗಲು ಅವರ ಕೋಟು ಬಟ್ಟೆಯೆಲ್ಲಾ ನಮ್ಮನೆಯಲ್ಲಿ ಸೇರಿತ್ತು.


23 ಮಾರ್ಚ್ 1946

ಬೆಳಿಗ್ಗೆ ಭಾವ ಹೊರಟೋದ್ರು. ಬಟ್ಟೆ ಒಕ್ಕೊಂಡೆ. ಮಾಧ್ವ ಯುವಕ ಸಂಘದ ಜವಾನ ಬಂದ. 8 ಆ. ಕೊಟ್ಟೆ. ಆಮೇಲೆ ಮನೆಗೆ ಹೋಗಿ ನೋಡಿದ್ರೆ ಬೀಗದ್ದೇ ಫಜೀತಿ. ಬೀಗ ಹಾಕಕ್ಕೂ ಬರಲ್ಲ, ತೆಗೆಯಕ್ಕೂ ಬರಲ್ಲ. ರಿಪೇರಿಗೆ ಹೋದೆ, 1 ಗಂ. ಬೇಕೂ ಅಂದ. ಮನಸ್ಸಿಗೆ ಬೇಜಾರಾಯ್ತು. ರಿಪೇರಿ ಮಾಡಿಸ್ಕೊಂಡು ಮನೆಗೆ ಬಂದಾಗ 11 ಗಂಟೆ. ಊಟ ಮಾಡಿ, City Bus ಹಿಡಿದು, ಓಡ್‍ಹೋದೆ.

ಸಂಜೆ 4ಕ್ಕೆ ಹೊರಡೋಣವೆಂದಿದ್ದೆ. ಅನಂತ್ಸುಬ್ರಾವ್ ಬೇರೆ ಕೆಲಸ ಹೇಳಿದರು. ಮಾಡೋದೋ ಬಿಡೋದೋ? ಅಂತೂ ಕೇಳಿಕೊಂಡು ಹೊರಟೆ.

ನಾನು ಬಂದ್ಮೇಲೆ ಕಾಳು ಕಟ್ಟಿಕೊಟ್ರು. Bagನಲ್ಲಿ ಹಾಕ್ಕೊಂಡು ಓಡಿದೆ. Stationಗೆ ಬಂದ್ರೆ ಎಷ್ಟೊತ್ತಾದ್ರೂ ರೈಲು ಹೊರಡ್ಲಿಲ್ಲ. Raghavan ಜತೇ ಸಿಕ್ರು. ಊರಿಗೆ ಬಂದ ತಕ್ಷಣ ಇಳಿದು ರಂಗನಾಥ ಹಾಲಿಗೆ ಬಂದೆ.

ಅಲ್ಲಿ ಮಾತಾಡ್ಸಿ, ನಾರಾಯಣಾವ್ರ ಜತೆಯಲ್ಲಿ ರಾಮಚಂದ್ರರಾಯರ ಅಂಗಡೀಗೆ ಬಂದೆ. ಅವರಿಗೆ ತಿಳಿಸಿ ಮನೆಗೆ ಬಂದೆ. ನಾರಾಯಣ ಮಾವ ಅಲ್ಲೇ ಇದ್ರು. ಜಾನೂ ಅಳ್ತಿದ್ಲು. ಅನ್ನ ಸೇರ್ಲಿಲ್ಲ. ಒಂದೇ ಉಸಿರಿಗೆ ಆಸ್ಪತ್ರೆಗೆ ಹೋದೆವು. ಅಮ್ಮಂಗೆ ಜ್ಞಾನ ಇಲ್ಲ. ಅವಳ್ನೂ ನೂಕ್ಕೊಂಡು ಅತ್ತ ಕಡೆ ತಿರುಗಿ ನೋಡದೆ ಹಿಡ್ಕೊಂಡು ಬಂದೆ. ಜ್ಞಾನ ತಪ್ಪಿತು. ಅಳು ಹೆಚ್ಚಿತು. ಸಾಧ್ಯವಿಲ್ಲವೆಂದು ಸುಂದರಮ್ಮನೋರಿಗೆ ಹೇಳಿ ಕಳ್ಸಿದೆ. ಅವ್ರು ಬಂದು ಕಷ್ಟ ಪಟ್ಟು ಎಲ್ರಿಗೂ ಸಮಾಧಾನ ಮಾಡಿದ್ರು. ರಾತ್ರಿಯೆಲ್ಲಾ ಸರಿಯಾಗಿ ನಿದ್ದೆಯಿಲ್ಲ. ಸಮಾಧಾನವಿಲ್ಲ. ಇಂದಿಗೆ ಹನುಮಂತರಾಯನ ಕಥೆ ಮುಗಿಯಿತು. ದೂರ, ಕಾಣದ ಕಡೆ ತಪ್ಪಿಸಿಕೊಂಡು ಹೊರಟು ಹೋದ.

ನಾನು ಬರದಿದ್ರೆ, ಅಮ್ಮನ ಗತಿ!?

24 ಮಾರ್ಚ್ 1946

ಬೆಳಿಗ್ಗೆ ಸುಂದರಮ್ಮನವ್ರು ಹೊರಟೋದ್ರು. ಕಾಫಿ ಮಾಡಿ ಕಳಿಸುವುದಾಗಿ ಹೇಳಿದ್ರು. ಅಮ್ಮಾವ್ರು ಮತ್ತೆ ರಾಗ ತೆಗೆದ್ರು. ಜಟಕಾ ಬಂದ ಮೇಲೆ ಕೂತು ಹೋಗಿ ಆಸ್ಪತ್ರೇಲಿ ಮುಖ ನೋಡಿದ್ದಾಯ್ತು. ಅಬ್ಬಾ ಎಷ್ಟು ಅಸಹ್ಯ, ಉಗ್ರ, ಕ್ರೂರ! ಆ ಎಳೆನಗೆಯ ಪ್ರಸನ್ನ ಮುಖವೆಲ್ಲಿ? ಅಮ್ಮಾವ್ರು ಅತೂ ಕರೆದೂ ಒದ್ದಾಡಿದರು. ಮನೆಗೆ ಬಂದಿದ್ದಾಯ್ತು. ಮನೇ ದುಃಖ ಹೇಳತೀರದು. ರಾಘೂಗೆ, ಪುಟ್ಟೂಗೆ ಕಾಗ್ದ ಬರೆದೆ. Officeಗೆ ಕಾಗದ ಬರೆದು Post ಮಾಡಲು ಕೊಟ್ಟೆ. ಮಧ್ಯಾಹ್ನ ರಾಜಣ್ಣ ಬಂದಿದ್ದ. ಆಮೇಲೆ ಅನಂತ, ಶರ್ಮ ಬಂದಿದ್ರು. ಅವ್ರೂ ಪೇಚಾಡಿದ್ರು.

ಜಾನೂಗೆ ಜ್ವರಾ ಎಂದು ವೆಂಕಟ್ರಾವ್ ಹತ್ರ ಔಷಧಾ ತಂದೆ. ಅವನೂ ಕೇಳಿ ಪೇಚಾಡಿದ. ಎಷ್ಟು ಅತ್ರೇನು? ಜಾನೂನ ಕರ್ಮಕ್ಕಾಗಿ ಕಳಿಸಲು ಅಮ್ಮಂಗೆ ದುಃಖ. ಮಾಡತಕ್ಕದ್ದೇನು? ನಾಣ ಮಾವನ ಮುಂದೆ ಮಾತಾಡ್ತಾ ಇರೋವಾಗ ನನಗೆ ತಿಳಿಯದೆಯೇ ದುಃಖ ಉಕ್ಕಿ ಉಕ್ಕಿ ಬಂತು.

25 ಮಾರ್ಚ್ 1946
ಬೆಳಿಗ್ಗೆ ರಾಮಚಂದ್ರರಾಯರ ಅಂಗಡಿಗೆ ಹೋದೆ. ಅವರು ಬಹಳ ಪೇಚಾಡಿಕೊಂಡ್ರು. 3 ಕಾರ್ಡು ತೆಗೆದುಕೊಂಡು ಬೆಂಗಳೂರು, ತಿಪ್ಪಗೊಂಡನಹಳ್ಳಿ, ರಾಘವ ಇವರಿಗೆ ಹಾಕಿದೆ. ಗುಂಡೂರಾವ್ ಅಂಗಡಿಯಲ್ಲಿ ಜೋಯಿಸ್ ಸಿಕ್ಕಿದ್ರು. ನಾಗರಾಜರಾಯ ಸಿಕ್ಕಿದ್ದ. ಅವನಿಗೂ ವಿಚಾರ ಹೇಳಿದೆ. ಪೇಚಾಡಿಕೊಂಡ.

ಸಂಜೆ ಬಂಡನ ಜತೇಲಿ Walking.

ರಾತ್ರಿ ಭಾವ ಬಂದ್ರು. ಪ್ರಹ್ಲಾದನಿಗೆ ಗೊತ್ತಾದೀತೂಂತ ಶಾಸ್ತ್ರಿಗಳಿಗೆ ಭಾವ ಕಾಗದ ಬರೆಸಿ ಕೊಂಡು Mail ಕಾಯಕ್ಕೆ ಲಕ್ಷ್ಮಿನಾರಾಯಣನ ಜತೇಲಿ ಹೋದ್ರು. ಅದು 3 hrs. Late ಅಂತೆ. ಬೆಳಿಗ್ಗೆ ಹಾಕಿದ್ದಾಯ್ತು.

26 ಮಾರ್ಚ್ 1946

ಬೆಳಿಗ್ಗೆ ಎಲ್ಲರೂ ನೀರು ಹಾಕಿಕೊಂಡಿದ್ದಾಯ್ತು. ಸುಂದರನ ಪಂಚೆ, ಶರ್ಟು ತರಿಸಿಕೊಂಡೆ. ಮಗುವನ್ನು ವೆಂ.ರಾವ್ ಗೆ ತೋರಿಸಿ ಔಷಧ ತಂದಿದ್ದಾಯ್ತು. ರಾತ್ರಿ Exercise Books ಗಂಟು ಕಟ್ಟಿದೆ.

27 ಮಾರ್ಚ್ 1946

ಬೆಳಗಿನ ಜಾವ ಅಮ್ಮಾವ್ರು ಬೆಂಗಳೂರಿಗೆ ಹೋದ್ರು, Mail Trainನಲ್ಲಿ. ನನಗೆ 1 trunk ತೆಗೆದುಕೊಂಡು ಹೋಗಬೆಕಾದ್ರೆ ಸಾಕು ಸಾಕಾಯಿತು. ಭಾವನ ಕೈಲಿ 5 ರೂ. ಕೊಟ್ಟೆ ಛಾರ್ಜಿಗಾಗಿ. ಬೀಗ ಸಿಕ್ಕಿ ಹಾಕಿಕೊಂಡು ಫಜೀತಿಯಾಯ್ತು. Post Officeಗೆ ಹೋಗಿ Registered ಕಾಗದ ಹಾಕಿದೆ. ರಾಘು ಇಂದ ಕಾಗದ ಬಂತು. ನಾರಾಯಣ ಸಿಕ್ಕು ಕಾಫಿ ಕೊಡಿಸಿದ. ಗಣೇಶ, ರವೀಂದ್ರ ಸಿಕ್ಕಿದ್ರು. ಡಿ.ರಾಮರಾಯರೂ ಕಂಡು ಪೇಚಾಡಿಕೊಂಡ್ರು.
Editor Delhiಗೆ ಹೋದ ವಿಷಯ ‘Daily News’ನಲ್ಲಿ ಓದಿದೆ. ‘ತಾಯಿನಾಡು’ ಸಿಗಲಿಲ್ಲ. Sreenivasa Rao CFd. Officeಗೆ ಹೋಗಿದ್ದೆ. ಇವತ್ತಿನ Paper 8 Pages.
ಪುಟ್ಟು ಬಂದಳು. ಸಂಜೆ Stationಗೆ ಹೋಗಿದ್ದೆವು. Dr.Royanಗಾಗಿ ಸರಿಯಾಗಿ ಬಂದ Poona Train 1 ಗಂಟೆ ಲೇಟಾಗಿ ಹೊರಟಿತು. ಅನಂತನ ಜತೇಲಿ ಅವರ ಮನೆಗೆ ಹೋಗಿದ್ದೆ. ಅಮ್ಮಾವ್ರು ಬಂದಿದ್ರು. ಮಧ್ಯಾಹ್ನ ಗುಂಡೂರಾವ್ ಸಿಕ್ಕಿದ್ರು. ಅವರಿಗೆ ವಿಚಾರವೇ ಗೊತ್ತಿರ್ಲಿಲ್ವಂತೆ.
28 ಮಾರ್ಚ್ 1946
ಬೆಳಿಗ್ಗೆ ಎದ್ದು ಗುಂಡೂರಾವ್ ಅಂಗಡಿಗೆ ಹೋದೆ. ಅಲ್ಲೇ ಮಾತಾಡ್ತಾ ಕೂತಿದ್ದೆ. ಹನುಮಂತರಾವ್ ಬಂದು ಪೇಚಾಡಿದ. ಮಧ್ಯಾಹ್ನ Officeಗೆ ಬರೆಯಲು ಕವರ್ ತಂದೆ, ಸಾಧ್ಯವಾಗಲಿಲ್ಲ.
29 ಮಾರ್ಚ್ 1946
ಬೆಳಿಗ್ಗೆ Officeಗೆ ಕಾಗದ ಬರೆದುಹಾಕಿದೆ. ನಾನೂ ಅಮ್ಮ ಬೆಳಿಗ್ಗೆ ಅಷ್ಟೊತ್ತಿಗೇ Suboverseer ಮನೆಗೆ ಹೋಗಿದ್ದೆವು. ಮಧ್ಯಾಹ್ನ ಮಲ್ಲಣ್ಣ ಸಿಕ್ಕಿದ್ದ. Cycle Shopಗೆ ಹೋಗಿ ರಿಪೇರಿ ಮಾಡಲು ಹೇಳಿದೆ.
ಸಂಜೆ ಅನಂತ ಸಿಕ್ಕಿದ್ದ. ಗುಂಡಪ್ಪ ಸಿಕ್ಕಿದ್ದ. C.S.ರಾಜಾರಾವ್ ಸಿಕ್ಕಿದ್ದ. ರಾಮು ಮದುವೇ ಮನೆಗೆ ಹೋಗಲಿಲ್ಲ. ಸಾವಿತ್ರಮ್ಮನವರು ಸಿಕ್ಕು ಪೇಚಾಡಿಕೊಂಡರು. ರಾತ್ರಿ Cycle Shop ತೆಗೆದಿರ್ಲಿಲ್ಲ. ಸಂಪತ್ತು ಬಂದಿದಾನೆ. ಅಮ್ಮ ದುಡ್ಡಿನ ವಿಚಾರ ಲೆಕ್ಕಾಚಾರ ಕೇಳಿ ಬಹಳ ಪೇಚಾಡಿಕೊಂಡಳು.
30 ಮಾರ್ಚ್ 1946
ಬೆಳಿಗ್ಗೆ ಶಂಕರರಾಯರು Death Certificateಗೆ Appln. Draft ಮಾಡಿಕೊಟ್ರು. Court Fee Stampಗಾಗಿ ಪರದಾಟ! Associationಗೆ ಹೋಗಿದ್ದೆವು. Town Cafeನಲ್ಲಿ ಒಲ್ಲದ ಬೆಲ್ಲದ ಕಾಫಿ! ಬೆಳಗ್ನಿಂದ Cycle Shop ಬಾಗಿಲು ತೆಗೆದಿಲ್ಲ. Court Stampಗೆ ಬದಲಾಗಿ Receipt Stamp ತಂದೆ. ಮಧ್ಯಾಹ್ನ ಪುನಃ ಹೋದೆ. Foolscap ಕಾಗದ ಇಲ್ಲದೆ ಬಹಳ ಒದ್ದಾಡಿದೆ. ಮಾಧವ ಸಿಗಲಿಲ್ಲ. ವೆಂಕಟ್ರಾಮು ಸಿಕ್ಕ. High Schoolಗೆ ಹೋದೆವು.

No comments: