ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Wednesday, December 15, 2010

ಟೈಪಿಂಗ್ ಕಲೀಬೇಕು, ಸೈಕಲ್ ತುಳೀಬೇಕು

..... ನಿರೀಕ್ಷೆಗಿಂತಲೂ ಕಡಿಮೆ ಸಂಬಳ. ಆದರೆ ಹೊಸ ವೃತ್ತಿಯಲ್ಲಿ ಸಿಗುತ್ತಿದ್ದದ್ದು ಅದಮ್ಯ ತೃಪ್ತಿ. ಕೆಲಸ ಬಿಟ್ಟು ಬಿಡಲೆ, ಎಲ್ಲೋ ಸೊಸೈಟಿಯಲ್ಲಿ ಕಾರಕೂನನಾದವನಿಗೆ 50 ರೂ. ಸಂಬಳ, ನಾನೂ ಅಲ್ಲಿಗೆ ಹೋಗಬಹುದಿತ್ತಲ್ಲವೆ? ಎಂಬ ತಾಕಲಾಟ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಿಡಿಯಬೇಕು, Cycle ತುಳಿಯಲು ಕಲಿಯಬೇಕು ... ಹೀಗೆ ಆದ್ಯತೆಗಳು ಸಿದ್ಧವಾಗುತ್ತವೆ 18ರ ಹರೆಯದ ಹುಡುಗನಲ್ಲಿ. ರೂಪಾಯಿಗಳಿರಲಿ, ಆಣೆ, ಕಾಸುಗಳಿಗೂ ಲೆಕ್ಕ ಹಾಕಬೇಕಾದ ಪರಿಸ್ಥಿತಿ. .... ಮುಂದೆ ಓದಿ.

20 ಫೆಬ್ರವರಿ 1946

ರಾಘೂ ಊರಿಗೆ ಹೋದ. Stationಗೆ ಹೋಗಿದ್ದೆ. 2 ಆ. ಕೈಲಿಟ್ಟ. ಕೊಂಡು ಕೊಂಡಿದ್ದ Platform Ticketನ ಯಾರಿಗೋ ತ್ಯಾಗ ಹಾಕಿದೆ.

Soldiers Coffee Boardನಲ್ಲಿ ಕಾಫಿ ಕುಡಿದೆ.

Proprietor ಆರ್ಟಿಕಲ್ Translate ಮಾಡೋಕ್ಕೆ ಕೊಟ್ರು.

21 ಫೆಬ್ರವರಿ 1946

ಪುಟ್ಟೂಗೆ ಕಾರ್ಡು ಬರೆದೆ. Societyಗೆ ಹೋಗಿದ್ದೆ, ಅಕ್ಕಿ (ಕೋಟಾ?) ಕಮ್ಮಿ ಮಾಡಿದ್ದಾರೆ.

22 ಫೆಬ್ರವರಿ 1946

Bombay Firing ಉಗ್ರವಾಗಿದೆ.

ಬೆಳಿಗ್ಗೆ ರಾಘ್ವನ್ನು ಹುಡುಕಿಕೊಂಡು ಹೋಗಿದ್ದೆ. ರಾಜಣ್ಣ ಸಿಕ್ಕಿದ್ದ. ಸಂಜೆ Achar (WFD) ಸಿಕ್ಕಿದ್ರು. ಅವರಿಗೆ ಕಾಫಿ ಕೊಡಿಸಿದೆ. ಸಂಜೆ Type ಮುಗಿದ ಮೇಲೆ ವೆಂಕಟೇಶಮೂರ್ತಿ ಕಾಫಿ ಕೊಡಿಸಿದ. ಬೆಳಗ್ಗೆ ಸುಂದರನ ಮನೆಗೆ ಹೋಗಿದ್ದೆ.

23 ಫೆಬ್ರವರಿ 1946

ಬೆಳಿಗ್ಗೆ Societyಗೆ ಹೋಗಿದ್ದೆ. ಅಕ್ಕಿ ಸರಿಯಾಗಿ ಕೊಟ್ರು. ರಾಘವ ಸಿಕ್ಕಿದ್ದ. ಅವನ್ನ ಅಕ್ಕೀ ಕೊಡಿಸೂ ಅಂದೆ. ಮಧ್ಯಾಹ್ನ ಆಫೀಸ್ ಹತ್ರ ಬಂದಿದ್ದ.

Officeಗೆ ಹೊರಡಕ್ಕೆ ಮುಂಚೆ ಗುಂಡಪ್ಪನ ಹೋಟಲಲ್ಲಿ ಹಾಲು, ಕಾರ್ಡು ತೊಗೊಳ್ಳೋಣಾಂತಿದ್ದೆ. ಆಗಲಿಲ್ಲ. ನಾನು ಕಾಫಿ ಕುಡಿದ ಮೇಲೆ ರಾಘವ ಬಂದ. ಸರಿ ಅವನಿಗೆ ಕಾಫಿ ಕುಡಿಸಿದೆ. ಸಂಜೆ ಸೀನ ಸಿಕ್ಕು ಅವನಿಗೆ ಕಾಫಿ. ರಾಜಣ್ಣ Phone ಮಾಡಿದ್ದ. Unionಗೆ ಹೋಗಲಿಲ್ಲ.

‘ರೋಹಿಣಿ’ Review ಮಾಡಿದೆ.

Instituteನಲ್ಲಿ ಪುಸ್ತಕಾ ಬಿಟ್ಟು ಬಿಟ್ಟಿದ್ದೆ. ತಿರುಗ ಓಡಿ ಹೋಗಿ ಪುಸ್ತಕ ತಂದಿದ್ದಾಯ್ತು.

[ಅಡಿ ಟಿಪ್ಪಣಿ:- ಪುಟ್ಟೂ - ಸುಬ್ಬಲಕ್ಷಮ್ಮ, ನಾಗೇಶರಾವ್ ಅವರ ತಾಯಿಯ ತಂಗಿ. ತುಮಕೂರು ಜಿಲ್ಲಿಯಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ಶಾಲೆ ಮೇಡಂ]

No comments: