ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Wednesday, December 15, 2010

ಮೊದಲ ಸಂಬಳ ಬಂದಾಗ ಮನಸ್ಸು ಮುದುಡಿತು

ಬೆಂಗಳೂರಿನ ‘ತಾಯಿನಾಡು’ ಕಚೇರಿಯಲ್ಲಿ ಉಪಸಂಪಾದಕನ ಕೆಲಸ ಸಿಗುತ್ತದೆ. ಇವರ Pay expectation ಕನಿಷ್ಟ 40 ರೂ., ಸಂಪಾದಕರು 35 ರೂ. ಕೊಡ್ತೀನಿ ಅಂತಾರೆ. ಕೊನೆಗೆ ಮ್ಯಾನೇಜರ್ ಕೊಟ್ಟಿದೆಷ್ಟು? ಹಿಂದೆ ಮಿಲಿಟರಿ ಡಿಪೋದಲ್ಲಿ ಬರ್ತಿದ್ದ ಸಂಬಳದ ಅರ್ಧದಷ್ಟು!

ಜೇಬಿನಲ್ಲಿ ದುಡ್ಡಿಲ್ಲ. ಮೊದಲ ಸಂಬಳವಿನ್ನೂ ಬಂದಿಲ್ಲ. ಪರಿಚಿತರೆಲ್ಲರಲ್ಲೂ ಸಾಲ ಕೇಳಾಗಿದೆ, ಉತ್ತರ ನಹೀಂ! ಅಕ್ಕನ ಮನೆಯಲ್ಲಿ ವಾಸ. ಕಚೇರಿಯಲ್ಲಿ ಕಾಫಿಗೆ ಕಾಸು ಹೊಂದಿಸಲು ಪರದಾಡಬೇಕಾದ ಕಾಲ. ಹೀಗೊಂದು ದಿನ ಆಫೀಸಿನಲ್ಲಿ ಕೂತಿದ್ದಾಗ unexpected ಆಗಿ ಊರಿನಿಂದ ಅಮ್ಮ ಬರುತ್ತಾರೆ. ಸರಿ, ಹಾಸಿಗೆ ಹೊತ್ತುಕೊಂಡು ಬಂಧು ಅಶ್ವಥ್ಥಣ್ಣನವರ ಮನೆಯಲ್ಲಿ ಇಡುತ್ತಾರೆ. ಸಿಟೀ ಬಸ್ಸಿನಲ್ಲಿ ಅಮ್ಮನನ್ನು ಅಕ್ಕನ ಮನೆಗೆ ಕಳುಹಿಸುತ್ತಾರೆ. ಇತ್ತ ಚಿಕ್ಕಪ್ಪ ಊರಿನಿಂದ ಬಂದಿರುತ್ತಾರೆ. ಊರಿನ ಇವರ ಜಮೀನು ಕೊಳ್ಳುತ್ತೇನೆಂದು ಅವರು ಕೊಟ್ಟ ಭರವಸೆ ಈಡೇರುವುದಿಲ್ಲ. ಬೆಂಗಳೂರಿನಲ್ಲಿ ಮಗ ಮನೆ ಇನ್ನೂ ಮಾಡಿಲ್ಲವೆಂಬ ಅಸಮಧಾನ ಅಮ್ಮನಿಗೆ ..... ಮುಂದೆ ಓದಿ

13 ಫೆಬ್ರವರಿ 1946

ಬೆಳಗ್ಗೆ ಅಮ್ಮನಿಗೂ ನನಗೂ ಮಾತಾಯ್ತು. ಅತ್ತಳು. ನಾನೇನು ಮಾಡಲಿ? ಮನೆ ಸಿಕ್ಕರೆ ಬೇಡಾ ಅಂತೇನ್ಯೇ? ಮಧ್ಯಾಹ್ನ ಅಮ್ಮ ಊರಿಗೆ ಹೋದಳು ..... ಇವತ್ತು ಕಾಫೀನೇ ಇಲ್ಲ.

14 ಫೆಬ್ರವರಿ 1946

ಇವತ್ತೂ ಕಾಫಿ ಇಲ್ಲದೇನೇ ಕತೆ ಹಾಕಿದೆ.

15 ಫೆಬ್ರವರಿ 1946

ರಾಘು ಮಧ್ಯಾಹನ ಆಫೀಸ್ ಹತ್ರ ಬಂದಿದ್ದ. ಕಾಫಿ ಕೊಡಿಸಿದ. 4 ಆ. ಬೇರೆ ಕೊಟ್ಟ. ಆಮೇಲೆ ರಾಘವ ಬಂದ ನನ್ನ Pay expect ಮಾಡಿ. ಎಲ್ಲರಿಗೂ Pay ಬಂತು. ನನಗೆ ಮಾತ್ರಾ ಇಲ್ಲ. ಸರಿ, ಅವನ್ನ ಸಾಗಿ ಹಾಕಿದೆ. ಕಾಫಿ, ವಡೆ ಗಿಟ್ಟಿಸಿದೆ. ಆಮೆಲೆ S.R.ಭೀಮು ಬಂದ. ಅದಾದ ಮೇಲೆ ಸೀನ ಬಂದ. ನನ್ನ ಗೋಳ್ಕರೆ ನೋಡಿ ಹೊರಟು ಹೋದ. ತಮ್ಮಣ ಸಿಕ್ಕ. ಅವನ್ಜತೇಲಿ ಮಾತಾಡ್ಕೊಂಡು, ಕಾಫಿ ಕೊಡಿಸಿ, Type ಮುಗಿಸಿ ಬರೋ ಹೊತ್ತಿಗೆ Late ಆಗಿತ್ತು.

16 ಫೆಬ್ರವರಿ 1946

ನಾಳೆ ನಾಟಕಕ್ಕೆ ಪಾಸ್ ಸಿಕ್ತು. ಸಂಬಳ ಬರ್ಲಿಲ್ಲಾಂತ Shamacharಗೆ ಹೇಳಿದೆ. ಸೋಮವಾರ ಬರದೆ ಹೋದ್ರೆ ಸಾಲ ಕೊಡ್ತೀನೀಂದ್ರು.

17 ಫೆಬ್ರವರಿ 1946

... ಸಂಜೆ ನಾಟಕಕ್ಕೆ ಹೋಗುವಾಗ ವಿಧಿ ಇಲ್ಲದೆ ರಾಘೂನ ದುಡ್ಡು ಕೇಳಿದೆ. 8 ಆ. ಕೊಟ್ಟ. ನಾಟಕ 3 ರೂ. ಸೀಟ್ನಲ್ಲಿ ಕೂತೆ - 5 ರೂ. ಬದ್ಲಾಗಿ. ನಾಟಕ ಚೆನ್ನಾಗಿತ್ತು. ಮನೆಗೆ ಬಂದಾಗ 10 ಗಂಟೆ.

18 ಫೆಬ್ರವರಿ 1946

ಇವತ್ತು Pay ಕೊಟ್ರು @ 30-0-0. ಮನಸ್ಸು ಚಿಕ್ಕದಾಯ್ತು. 27-1-6 ಬಂತು. Shamacharನ ಕೇಳಿದೆ. ಹೇಳ್ತೀನೀಂದ್ರು.

ಕಿಟ್ಟನಿಗೆ ಕಾರ್ಡು ಬರೆದೆ. ಅವನು ಪೈಗಂಬರ್ ಜಯಂತಿ Invitation ಕಳಿಸಿದಾನೆ. [ರಾಘವೇಂದ್ರ ಮೂರ್ತಿ, ಸೋಮ, ವೆಂಕಟೇಶ್ ಸಿಕ್ಕಿದ್ರು. ಮುನಿರಾಜು ಸಿಕ್ಕು ಮಾತಾಡಿಸಿದ].
ನಾಟಕದ report ಬರೆದುಕೊಟ್ಟೆ.

No comments: