ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Thursday, December 16, 2010

Translations ಜತೆಗೆ ಇಂಗ್ಲಿಷ್ Proofsಊ ನೋಡ್ಬೇಕು

24 ಫೆಬ್ರವರಿ 1946, ಭಾನುವಾರ

‘ರೌಂಡ್ ಟೇಬರ್’ Articleನ Translate ಮಾಡಿ ರಾಘವನ ಕೈಗೆ ಕೊಟ್ಟೆ.

ಸಂಜೆ ಕುಮಾರಾ ಪಾರ್ಕ್ ಕಡೇ ಇಂದ Race Course ಮಾರ್ಗವಾಗಿ Reading Roomಗೆ ಬಂದೆವು. ಸತ್ಯನಾರಾಯಣ ಸಿಕ್ಕಿದ್ದ. ರಾಘ್ವ ಮತ್ತೆ ಕಾಫಿ ಕೊಡಿಸಿದ.

25 ಫೆಬ್ರವರಿ 1946

ಇವತ್ತು ಮಧ್ಯಾಹ್ನ Office ಹತ್ರ ವಾಸೂ ಬಂದಿದ್ದ. ನಾಳೆ ಊಟಕ್ಕೆ ಬಾಂತ ಕರೆದ.

Prop. `M.V.' ಮೇಲೆ Articleನ Translate ಮಾಡೋಕ್ಕೆ ಕೊಟ್ರು.

26 ಫೆಬ್ರವರಿ 1946

Typeಗೆ ಚಕ್ಕರ್.

27 ಫೆಬ್ರವರಿ 1946

Iyengar ಬಂದಿರ್ಲಿಲ್ಲ. ಬಂಗಾರೂನೂ ಇಲ್ಲ. ಕೆಲವು ಇಂಗ್ಲಿಷ್ Proofs ನೋಡಿಕೊಂಡೆ. ಯಜಮಾನರ ‘Madura Mangamma Choultry' Translate ಮಾಡಿದೆ. `Hindustan Times'ನಲ್ಲಿ Subhas Bose Escape ಆದ Article ಬಂದಿದೆ, ಚೆನ್ನಾಗಿದೆ! Indonesianರ ಮೆಲೆ Torture ಮಾಡಿದ ಲೇಖನಾನ Translate ಮಾಡಿ ಅಂದ್ರು, Editor. ನಾಳೇ ಮಾಡ್ಬೇಕು.

ರಾಘವ Ration Card ಕೊಟ್ಟ.

28 ಫೆಬ್ರವರಿ 1946

ಸುಂದ್ರ ಹುಡುಕ್ಕೊಂಡು ಬಂದಿದ್ನಂತೆ. ಏಕೇಂತ ಹೋದೆ. ಅವನ ‘ಗುರುಕುಲ ಕಥಾವಳಿ’ಗೋಸ್ಕರ ಬಂದಿದ್ನಂತೆ.

ಬೆಳಿಗ್ಗೆ ಕೆಲವು English Proofs ನೋಡಿದೆ. ಕನ್ನಡ Matters ಮಾಡಿದೆ. ಬೋಸ್‍ದು II Articleನ Prop. ಇಷ್ಟದಂತೆ Cut ಮಾಡಿ ಇಟ್ಟೆ. Torture Article Translate ಮಾಡ್ತಾ ಇದ್ದೀನಿ, ಇವತ್ತು. ಕಾಫಿ ಕೂಡಾ ಇಲ್ಲ. ಮಹಾರಾಜರು ಹೊಳೇನರಸೀಪುರದ ಹತ್ತಿರ ಹಳ್ಳಿಯೋರಿಗೆ ಅನ್ನ ತಂದು ಬಡಿಸಿದರಂತೆ. ಪರವಾ ಇಲ್ಲ, Stunts ಚೆನ್ನಾಗಿವೆ.

Typewr. ಇವತ್ತು Capitals ಕಲೀತಾ ಇದ್ದೆ. ಅಷ್ಟರಲ್ಲೇ ಅಲ್ಲಿಗೆ ಸುಂದರ, ರಾಜಣ್ಣ ಬಂದ್ರು. ಕಾಫಿನಾರೂ ಗಿಟ್ಟೀತು ಅಂದ್ಕೊಂಡು ಬಂದೆ, ಏನೂ ಇಲ್ಲ.

ಮಳೆ ಸ್ವಲ್ಪ ಹನಿಯಿಟ್ಟಿತು.

No comments: