ಕಾಫೀಬೋರ್ಡ್‍ನಲ್ಲಿ ಕೆಲ್ಸ ಸಿಗೋಲ್ಲ ಅನ್ನೋದು ಖಾತ್ರಿಯಾಯ್ತು
Shamachar Officeಗೆ ಬಂದ್ರು ಇವತ್ತು. ಅಷ್ಟು Liberties ಇಲ್ಲ ಅವರಿಗೆ.
[ಅಡಿ ಟಿಪ್ಪಣಿ:- ಶಾಮಾಚಾರ್ ‘ತಾಯಿನಾಡು’ ಸೇರಿದರು.]
28ನೇ ಜನವರಿ 1946
Prop. ಬಂದಿದಾರೆ. New Types ಬಂದಿವೆ.
30ನೇ ಜನವರಿ 1946
ರಾಘ್ವ ಬೆಳಿಗ್ಗೆ ಸಿಗ್ಲಿಲ್ಲ. ಸಂಜೆ Union, ರಾಘ್ವನ ಹುಡ್ಕುಕ್ಕೊಂಡುಹೋದೆ. ನಿನ್ನೆ ಕೆಲವು Applicationsನ ಅವ್ರ ಸೆಕ್ರೆಟರೀನೇ choose ಮಾಡಿಕೊಂಡನಂತೆ. ನಂದಿಲ್ಲ.
31ನೇ ಜನವರಿ 1946
ಅನಂತಸುಬ್ಬರಾಯರಿಗೆ ನಾಳೆಯಿಂದ ರಜಾ.
ಕೊಚಿನ್ ಮಹಾರಾಜ ಸತ್ತು ಹೋದ.
04ನೇ ಫೆಬ್ರವರಿ 1946
‘ವಾಹಿನಿ’ ಹೊಸ Getupನಲ್ಲಿ ಬಂದಿದೆ. ಇನ್ನೂ ಸಂಬಳ ಬರಲಿಲ್ಲ. ಅರಳೇಪೇಟೆಗೆ ಹೋಗಿದ್ದೆ.
06ನೇ ಫೆಬ್ರವರಿ 1946
ಸಂಜೆ ಅನಂತಸುಬ್ರಾವ್ ಸಿಕ್ಕಿದ್ದರು.
Viceroy Sira Tour.
08ನೇ ಫೆಬ್ರವರಿ 1946
ಬಹಳ ಕೆಲಸ. ಶ್ರೀನ್ವಾಸನ್ (Ed.) ಕೇಳಿದ್ರು Cycle ಬರತ್ಯೇಂತ. ಇಲ್ಲಾಂದೆ. Shame!
Ghouse Mohiyuddeenದು Lecture ಬಂದಿದೆ. Viceroy Tour Phone Call Rec. ಮಾಡಿ ಕಂಪೋಸಿಂಗ್ ಕೊಟ್ಟೆ. API Phone.
ಸಂಜೆ ಸೀನಾ ಬಂದಿದ್ದ. ಬೇಂದ್ರೆ ಕಾಣಿಕೆಗೆ 4 ಆ. ಕಿತ್ತ.
[ಅಡಿ ಟಿಪ್ಪಣಿ:- ಗೌಸ್ ಮೊಹಿಯುದ್ದೀನ್ ಬಹುಶಃ ಪತ್ರಕರ್ತರು ಅನ್ಸತ್ತೆ. ಸಿರಾದಲ್ಲಿನ ಬರಗಾಲ ಪೀಡಿತರನ್ನು ಕಾಣಲು ವೈಸ್‍ರಾಯ್ ಭೇಟಿಯಿತ್ತಿರಬಹುದು.
ಆಗ ದೇಶೀಯ ವಾರ್ತೆಗಳು A.P.I. ನಿಂದ, ಮತ್ತು ವಿದೇಶಿ ವಾರ್ತೆಗಳು ರಾಯಿಟರ್ ಸಂಸ್ಥೆಯಿಂದ ತಂತಿ ಮೂಲಕ ಬರುತ್ತಿದ್ದವು. ಬೆಂಗಳೂರಿನಲ್ಲಿ A.P.I. ಕಚೇರಿ ಕ್ವೀನ್ಸ್ ರಸ್ತೆಯಲ್ಲಿತ್ತು, (ಮುಂದೆ ಅದೇ P.T.I. ಆಯಿತು) ಆಗ ಟೆಲಿಪ್ರಿಂಟರ್ ಸೌಲಭ್ಯವಿರಲಿಲ್ಲ. ತಂತಿಯ ಮೂಲಕ ಅವರ ಕಚೇರಿಗೆ ಬಂದುದನ್ನು, ಚಂದಾದಾರರಾದ ಸ್ಥಳೀಯ ಪತ್ರಿಕೆಗಳಿಗೆ, ಬಹು ಮುಖ್ಯ ಮತ್ತು ಜರೂರಾದುದನ್ನು ಫೋನ್ ಮೂಲಕ ತಿಳಿಸುತ್ತಿದ್ದರು, ಉಳಿದ ವಾರ್ತೆಗಳನ್ನು ಟೈಪ್ ಮಾಡಿ ಪ್ರತಿ 2 ಗಂಟೆಗೊಮ್ಮೆ ತಮ್ಮ ದೂತರ ಮೂಲಕ ಎಲ್ಲ ಕಚೇರಿಗಳಿಗೂ ಕಳಿಸುತ್ತಿದ್ದರು. ಎಷ್ಟೋ ವೇಳೆ ಅತ್ಯಂತ ಪ್ರಾಮುಖ್ಯದ ಸುದ್ದಿಗಳನ್ನು (FLASH NEWS) ಆ ಸಂಸ್ಥೆಯ ಮುಂಬಯಿ ಮತ್ತು ಮದ್ರಾಸ್ ಪ್ರಾದೇಶಿಕ ಕಚೇರಿಯವರು ನೇರವಾಗಿ ಪತ್ರಿಕಾ ಕಚೇರಿಗಳಿಗೆ ತಂತಿ ಮೂಲಕ ಕಳಿಸಿದ್ದೂ ಉಂಟು. ಅಂದರೆ ಫೋನ್ ಬಳಿ ಚುರುಕಾಗಿ, ಶೀಘ್ರವಾಗಿ, ತಪ್ಪಿಲ್ಲದೆ, ಉತ್ಸಾಹದಿಂದ ಬರೆದುಕೊಳ್ಳುವ ಹುಮ್ಮಸ್ಸಿನ ಸಿಬ್ಬಂದಿಯವರು ಇರಬೇಕು. ಸಾಮಾನ್ಯವಾಗಿ ವಯಸ್ಸಾದ ಹಾಗೂ ಹಿರಿಯ ಉದ್ಯೋಗಿಗಳು ಹೊಸಬರಿಗೆ ಹಾಗೂ ಕಿರಿಯರಿಗೆ ಈ ಫೋನ್ ಕಿರಿಕಿರಿಯನ್ನು ವರ್ಗಾಯಿಸಿ, ಅವರು ಬರೆದುಕೊಂಡಾದ ಮೇಲೆ ವಾರ್ತೆಗಳನ್ನು ಯಾವ ರೀತಿ ಪತ್ರಿಕೆಗೆ ಕೊಡಬೇಕೆಂಬುದಾಗಿ ನಿರ್ದೇಶಿಸುತ್ತಿದ್ದರು; ಹೀಗೆ ನಡೆದುಕೊಳ್ಳುವುದು ಹೆಚ್ಚುಗಾರಿಕೆಯೆಂದು ಭಾವಿಸಿದ್ದರು. ]
09ನೇ ಫೆಬ್ರವರಿ 1946
Conferenceಗಾಗಿ ರಜಾ. ಮನೇಲಿ ಹೇಳ್ಲಿಲ್ಲ. ಊಟ ಮಾಡ್ಕೊಂಡು ಸಿಟೀ ಕಡೆ ಹೊರಟೆ, ರಾಜಣ್ಣನ ಕರ್ಕೊಂಡು. ನಾಳೆ Cycle ಕಲೀಸ್ತೀನೀಂದ.
[ಬಹುಶಃ ಪತ್ರಕರ್ತರ ಅಸೋಸಿಯೇಶನ್ ಕಾನ್ಪರೆನ್ಸ್ ಇರಬಹುದು.
ರಾಜಣ್ಣ ಬಹುಶಃ ದಾಯಾದಿ ಸಹೋದರನಿರಬೇಕು.]
10ನೇ ಫೆಬ್ರವರಿ 1946
ಬೆಳಿಗ್ಗೇ Cycling ಹೋದೆ. 2 ರೌಂಡಿಗಾಗ್ಲೇ ತಲೇ ತಿರುಗೋ ಹಾಗಾಯ್ತು. B.S.Ramachar ಜತೇಲಿ ಸಂಜೆ ಹೋದೆ. ಅ.ನಾರಾಯಣಸ್ವಾಮಿ ಅಯ್ಯರ್ ಸಿಕ್ರು. ಶಂಕರಯ್ಯ ಹಾಲ್ ಸಂಗೀತಕ್ಕೆ ಎಳಕೊಂಡು ಹೋದರು.
[ಪ್ರಸಿದ್ಧ ಗಮಕಿ, ಕವಿ ಬಿ.ಎಸ್.ರಾಮಾಚಾರ್ 11-12-2010 ಬೆಂಗಳೂರಿನಲ್ಲ್ಲಿ ನಿಧನರಾದರು. ಆಗ ಅವರು ‘ಪ್ರಜಾಮತ’ ಪತ್ರಿಕೆಯ ಉಪಸಂಪಾದಕರಾಗಿದ್ದರು. ನಾಗೇಶರಾವ್ ಅವರಿಗೆ ತುಮಕೂರಿನಲ್ಲಿಯೇ ಮಿತ್ರರಾದವರು.]
11ನೇ ಫೆಬ್ರವರಿ 1946
ಅನಂತಸುಬ್ಬರಾವ್ ಬಂದಿದಾರೆ. ಹಾಸನಕ್ಕೆ ಹೋಗಿದ್ದ Journalists ನಿಧಾನವಾಗಿ ಬಂದರು.
[ಬಹುಶಃ Conference ಹಾಸನದಲ್ಲಿ ಇದ್ದಿರಬಹುದು].
No comments:
Post a Comment