ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Tuesday, December 14, 2010

ಮೊದಲ ದಿನ ಮೌನ .....

04 ಜನವರಿ 1946

ತಂಗಳು ತುತ್ತು ತಿಂದು ‘ತಾಯಿನಾಡು’ officeಗೆ ಹೋದೆ. 8 1/2 ಆದರೂ ಶ್ರೀನಿವಾಸನ್ ಬಂದಿರಲಿಲ್ಲ. ಪಾರ್ಥಸಾರಥಿ ಕೈಲಿ ಕಾಗದ ಕೊಟ್ಟೆ. ಕಾದೆ. 9 ಗಂಟೆಗೆ ಶ್ರೀನಿವಾಸನ್ ಬಂದರು. ಸ್ವಲ್ಪ ಹೊತ್ತು ಮಾತಾಡಿದರು. ‘ತಾಯಿನಾಡು’ವನ್ನು ಹೊಗಳಿಕೊಂಡರು. ‘ಜನವಾಣಿ’ಯನ್ನು ಟೀಕಿಸಿದರು. 35 Rs. starting ಅಂದರು. ನಾನು ‘ಶಾಮಾಚಾರ್’ ಹೇಳಿದಾರೆ, 40 ಅಂದೆ. ‘ಆಗಲಿ, Proprietor ಬರ್ತಾರೆ. 11ಕ್ಕೆ ಬನ್ನಿ’ ಅಂದರು. Unionಗೆ ಹೋದೆ. ‘I.N.A. Heroes Set Free' ಅನ್ನೋ Headline ಓದಿ ಸಂತೋಷ ಪಟ್ಟೆ. 12ರ ಹೊತ್ತಿಗೆ ರಾಮಯ್ಯನವರು ಬಂದರು. ನನ್ನ ವಿಚಾರವೆಲ್ಲಾ ವಿಚಾರಿಸಿ 1 Month ಆದ ಮೇಲೆ Pay Fix ಮಾಡ್ತೀನೀಂದ್ರು. ಬೇಕಾದರೆ July ಆದ ಮೇಲೆ Studies Continue ಮಾಡಿದರೂ ಮಾಡಿ ಅಂದರು. ಈ 1 Month Pay ಕೂಡ ಕೊಡ್ತೀನೀಂತ ನನ್ನ ಮನಸ್ಸಿನ ಸಂದೇಹನ ತಾವೇ ನಿವಾರಣೆ ಮಾಡಿದರು. ಅನಂತಸುಬ್ಬರಾಯರು ಎಂಬುವವರನ್ನು ಕರೆದು ಅವರ Assistant ಆಗಿ ಮಾಡಿದರು. ಅವರೂ ಒಳ್ಳೆಯವರೇ. 12 ಗಂಟೆ ಆದ ಮೇಲೆ ಊಟಕ್ಕೆ ಹೋಗಿ ಬನ್ನಿ ಅಂದರು. 3ರ ಹೊತ್ತಿಗೆ ವಾಪಸು ಹೋದೆ. ಅಂತೂ ‘ತಾಯಿನಾಡು’ ನನಗೆ ಒಗ್ಗಿತು. ಎಲ್ಲರೂ ಸರಳರು. ಅವರನ್ನು ಮನಸ್ಸಿನಲ್ಲೇ ವಂದಿಸಿದೆ. ನಾಳಿನಿಂದ 11ಕ್ಕೆ ಹೋಗ್ತೀನಿ. ರಾಘೂಗೆ ಕಾಗದ ಹಾಕಿದೆ. ಕಾಫೀಗೆ ಕೂಡಾ ಒಂದು ಕಾಸಿಲ್ಲ

[ಅಡಿ ಟಿಪ್ಪಣಿ:- ಶ್ರೀನಿವಾಸನ್ - ಪಿ.ಬಿ.ಶ್ರೀನಿವಾಸನ್, ‘ತಾಯಿನಾಡು’ ಸಂಪಾದಕರು;
ಶಾಮಾಚಾರ್ - ಎ.ಟಿ.ಶಾಮಾಚಾರ್, ತುಮಕೂರಿನಲ್ಲಿ ಹೆಚ್.ಆರ್.ನಾಗೇಶರಾವ್ ಅವರಿಗೆ ಮೇಷ್ಟ್ರರಾಗಿದ್ದವರು, ನಂತರ ‘ತಾಯಿನಾಡು’ ಪತ್ರಿಕೆಯಲ್ಲಿ ಸಹೋದ್ಯೋಗಿಯಾದವರು;
ರಾಮಯ್ಯ - ಪಿ.ಆರ್.ರಾಮಯ್ಯ, ‘ತಾಯಿನಾಡು’ ಮಾಲಿಕರು ಹಾಗೂ Daily News ದಿನಪತ್ರಿಕೆಯ ಸಂಪಾದಕರು;
ಅನಂತಸುಬ್ಬರಾವ್ - ಕೆ.ಅನಂತಸುಬ್ಬರಾವ್, ‘ತಾಯಿನಾಡು’ ಪತ್ರಿಕೆಯ ಹಿರಿಯ ಉಪಸಂಪಾದಕರು;
ರಾಘೂ - ಹೆಚ್.ಆರ್.ರಾಘವೇಂದ್ರರಾವ್, ಹೆಚ್.ಆರ್.ನಾಗೇಶರಾವ್ ಅವರ ಅಣ್ಣ, ಮೈಸೂರು ಟೊಬ್ಯಾಕೊ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿದ್ದವರು.
Union - ಕ್ಯಾಂಟೀನ್ ರೀತಿಯಿದ್ದ ಸಣ್ಣ ರೆಸ್ಟೊರೆಂಟ್, ಅಲ್ಲಿ ಓದಲು ಪತ್ರಿಕೆಗಳು ಸಿಗುತ್ತಿದ್ದವು, ರೇಡಿಯೋ ಇತ್ತು.]

No comments: