ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Tuesday, December 14, 2010

ಪತ್ರಕರ್ತನ ದಿನಚರಿ

[1945 ರಲ್ಲಿ ಡಿಗ್ರಿ ಕಾಲೇಜು ಅಡ್ಮಿಶನ್‍ಗೆಂದು ತುಮಕೂರಿನಿಂದ ಬೆಂಗಳೂರಿಗೆ ಬಂದ 18 ವರ್ಷದ ಹೆಚ್.ಆರ್.ನಾಗೇಶರಾವ್ ಅವರಿಗೆ ಸೆಂಟ್ರಲ್ ಕಾಲೇಜಿನಲ್ಲಿ ಟೈಮಾಗೋಯ್ತು, ಮುಂದಿನ ವರ್ಷ ಬಾ ಎಂಬ ಉತ್ತರ ಬರುತ್ತದೆ. ಬೆಂಗಳೂರಿನಲ್ಲಿಯೇ ಉಳಿದು ಕೆಲಸಕ್ಕಾದರೂ ಪ್ರಯತ್ನಿಸೋಣವೆಂದರೆ ಎಲ್ಲೆಲ್ಲೂ ನಿರಾಸೆ. ಹಿಂದೆ 1944ರ ಕಾಲೇಜು ರಜೆಯಲ್ಲಿ ಬಂದು ವೈಟ್‍ಫೀಲ್ಡ್‍ನಲ್ಲಿದ್ದ ಮಿಲಿಟರಿ ಡಿಪೋನಲ್ಲಿ ಸ್ಟೋರ್ಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಅನುಭವದ ಆಧಾರದ ಮೇಲೆ ಅಲ್ಲಿಗೇ ಮತ್ತೆ ಸೇರುತ್ತಾರೆ. ಉಳಿದಂತೆ ಕೆಲಸಕ್ಕೆ ಅಲೆದಾಟ. ತಾಯಿನಾಡು ಪತ್ರಿಕೆಯ ಉಪಸಂಪಾದಕನಾಗಿ ಸೇರುವ ಹಿಂದಿನ ದಿನದ ಡೈರಿ ನಮೂದು ನಿಮ್ಮ ಅವಗಾಹನೆಗೆ]
ಜನವರಿ, 3, 1946

ಇವತ್ತು ಹೊತ್ತಿಗೆ ಮುಂಚೆ ಹೋಗಬೇಕೆಂದು ಮಾಡಿಕೊಂಡರೆ ಎಂದಿಗಿಂತ Lateಏ. Coffee Boardಗೆ ಹೋಗಿ Office Supdt. ಕೈಲಿ Application ಕೊಟ್ಟೆ. `For the time being No Vacancy. As soon as there is we shall inform you' ಅಂದ. ಸರಿ, ಅಲ್ಲಿಂದ Provident Co.,ಗೆ. ಅಲ್ಲೂನೂ ನಹೀಂ! ಅಲ್ಲಿಂದ Insurance Co.,ಗೆ ಹೋದೆ. Asst. Managerನ ನೋಡಿದ್ದಾಯ್ತು. ಅವನು Office Supdt. ಹತ್ರ ಕಳ್ಸಿದ, ಅವನು Appln. ತೊಗೊಂಡು ‘ತಿಳಿಸ್ತೀವಿ ಹೋಗೀ’ಂದ. ‘ದೇವರು ವರ ಕೊಟ್ಟರೂ ಪೂಜಾರಿ ಕೊಡ, ಅಂದ್‍ಹಾಗಾಯ್ತು!’

ಆಕಾಶ ತಲೇ ಮೆಲೆ ಬಿದ್ದ ಹಾಗಾಯ್ತು! ನಿರಾಸೆಯಾಗಿ Shamachar ಮನೇ ಕಡೆ ಹೊರಟೆ. ದಾರಿಯುದ್ದಕ್ಕೂ ಅಪಶಕುನಗಳೇ! ಏನೋ ಹೋದೆ. ಸಿಕ್ಕಿದರು: `you saved me from a lot of trouble' ಅಂದ್ರು, ಧೈರ್ಯ ಆಯ್ತು. ಆಮೇಲೆ P.B.Srinivasanಗೆ ಒಂದು ಪತ್ರ ಬರಕೊಟ್ಟು, ನಾಳೆಯೇ ಹೋಗಿ ಅಂದ್ರು. ಹಾಗೇ ಆಗಲಿ ಅಂದೆ. ಇವತ್ತಿಗೆ ಶಕುನಗಳನ್ನು ಮರೆತೆ. ಮುಂದೂ ನಂಬಲಾರೆ!

[ಅಡಿ ಟಿಪ್ಪಣಿ:- Shamachar - ಎ.ಟಿ.ಶಾಮಾಚಾರ್, ನಾಗೇಶರಾವ್ ಅವರಿಗೆ ತುಮಕೂರಿನಲ್ಲಿ ಮೇಷ್ಟ್ರಾಗಿದ್ದವರು.
P.B.Srinivasan - ತಾಯಿನಾಡು ಪತ್ರಿಕೆಯ ಸಂಪಾದಕರು]

No comments: