ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Saturday, May 02, 2009

ಹಾಲ್-ಹೋಲು; ಬ್ಯಾಂಕ್-ಬೇಂಕ್‍ಗಳ ನಡುವೆ ತಾಕಲಾಟ!

ಬಹುಶಃ ಪ.ಗೋ. 01.08.1959ರಂದು ಮಂಗಳೂರಿನ ‘ನವಭಾರತ’ ಪತ್ರಿಕೆಗೆ ಸೇರ್ಪಡೆಯಾಗಿರಬಹುದು. ಆ ಸಮಯಕ್ಕೆ ಹೆಚ್.ಆರ್.ನಾಗೇಶರಾವ್ ಬೆಂಗಳೂರಿನ ‘ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಸೇರಿ ಒಂದು ವರ್ಷ ಕಳೆದಿತ್ತು. ದಿನಾಂಕ 08.08.1959 ಪ.ಗೋ. ತಮ್ಮ ಮಿತ್ರರಿಗೆ ಹೀಗೊಂದು ಪತ್ರ ಬರೆಯುತ್ತಾರೆ. ಅದು ದಿನಾಂಕ 10.08.1959ರಂದು ತಲುಪಿತೆಂದು ನಾಗೇಶರಾವ್ ಪತ್ರದ ಮೇಲೇ ದಾಖಲಿಸಿದ್ದಾರೆ. ಪ.ಗೋ. ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲಿ ಪೋಸ್ಟ್ ಕಾರ್ಡ್ ತುಂಬಿಸಿದ್ದಾರೆ.

ನಮಸ್ತೆ ನಾಗೇಶರಾಯರಿಗೆ

ಒಂದನೇ ತಾರೀಕಿನಿಂದ ನೊಗಕ್ಕೆ ಕತ್ತು ತಗಲಿದೆ. ಸಾಪ್ತಾಹಿಕ ಮಂಜರಿಯ ವ್ಯವಸ್ಥೆ.

ಇಲ್ಲೂ ಸಿಗಲಿಲ್ಲ ನ್ಯೂಸೂ!

ಇರಲಿ ‘ಕಾಲಕ್ಕೆ ತಕ್ಕಂತೆ ತಾಳ’ ತಾನೆ? 16ರಿಂದ ಸಂಚಿಕೆ ಆರಂಭ.

ನೀವು ಹೇಗಿದ್ದೀರೆಂದು ತಿಳಿಯುವ ಕುತೂಹಲ. ಪತ್ರ ವ್ಯವಹಾರವಿರಿಸಿಕೊಳ್ಳಲೂ ಬಹುದಲ್ಲವೆ!
ಬೆಂಗಳೂರಿನ ಗಾಳಿ ತಿಂದು ಅಭ್ಯಾಸ .... ಮಂಗಳೂರಿನ ಸೆಕೆಯುಣ್ಣಲು ಆಗಿಲ್ಲ. ವೃತ್ತಿ ಸಹಜ ಹೋಟಲೂಟ (‘ಅವರು’ ಊರು ಮನೆಯಲ್ಲಿ!)

ಬರಹವಿನ್ನೂ ನಾಟಿಲ್ಲ. ಹಾಲ್ - ಹೋಲು; ಬ್ಯಾಂಕ್ - ಬೇಂಕುಗಳ ನಡುವೆ ತಾಕಲಾಟ ಇನ್ನೂ ಆಗುತ್ತಿದೆ. (ಕೈವಾಡ ಏನಾದರೂ ಗುರುತಿಸಿದ್ದೀರಾ?). ಕೆಲವೊಮ್ಮೆ ವಾರ್ತಾವಿಭಾಗಕ್ಕೂ ಹೋಗುತ್ತಿದ್ದೇನೆ - ಅನಧಿಕೃತವಾಗಿ.

ಶ್ರೀ ಅ.ಸುಬ್ಬರಾಯರಿಗೆ ಒಂದು ನೆನಕೆ ಸಲ್ಲಿಸಿ (ಕಾಫಿ timeನಲ್ಲಾದರೆ ಉತ್ತಮ)

ಉತ್ತರ ಹಾರೆಇಸಲೆ?

ನಿಮ್ಮಪ.ಗೋ. 8/8/59

P. GOPALAKRISHNA

NAVABHARATH

MANGALORE - 3 (S.K.)

No comments: