ಸುದ್ದಿಜೀವಿ

ಸುದ್ದಿಜೀವಿ
ನಾಗೇಶರಾವ್

Wednesday, March 21, 2007

A tradition introduced by 'Tayi Nadu' - ಇದು ’ತಾಯಿನಾಡು’ ಸತ್ಸಂಪ್ರದಾಯ

`ತಾಯಿನಾಡು' ಪತ್ರಿಕೆಯಲ್ಲಿ ಇಂದು ನಂಬಲಸಾಧ್ಯವಾದಂಥ ಸಂಪ್ರದಾಯವೊಂದಿತ್ತು. ಯಾವುದೇ ಕ್ರೀಡೆ ಅಥವಾ ಮನರಂಜನಾ ಕೂಟಗಳ ಬಗ್ಗೆ ವರದಿ ಮಾಡಬೇಕಾದಲ್ಲಿ ಪತ್ರಿಕೆಯ ಉದ್ಯೋಗಿಗಳು `ಉಚಿತ ಪಾಸ್'ಗಳನ್ನು ಬಳಸುವಂತಿರಲಿಲ್ಲ, ಪತ್ರಿಕೆಯ ವತಿಯಿಂದಲೇ ಟಿಕೆಟ್ ಪಡೆಯಬೇಕಿತ್ತು. ಪ್ರಾಯೋಜಕರು ಅಂಥ ಪಾಸ್‍ಗಳನ್ನು ಪತ್ರಿಕೆಗೆ ಕಳುಹಿಸಿದಲ್ಲಿ ಸಂಪಾದಕರು ಅವುಗಳನ್ನು ಹಿಂದಿರುಗಿಸುತ್ತಿದ್ದರು. `ಇಂಟರ್‌ನ್ಯಾಶನಲ್ ರೆಸ್ಲಿಂಗ್ ಫೆಡರೇಶನ್' ಬೆಂಗಳೂರಿನಲ್ಲಿ ಕುಸ್ತಿ ಸ್ಫರ್ಧೆಯೊಂದನ್ನು ನಡೆಸಿತ್ತು, ಸ್ಫರ್ಧಾಕೂಟದ ಎಲ್ಲ ದಿನಗಳಿಗೂ ಅನ್ವಯವಾಗುವ ಎರಡು ಪಾಸ್‍ಗಳನ್ನು ಅದು `ತಾಯಿನಾಡು' ಪತ್ರಿಕೆಗೆ ಕಳುಹಿಸಿತ್ತು. ಈ ಬಗ್ಗೆ ಕೂಟದ `ಸಂಘಟಕರಿಗೆ' ಸಂಪಾದಕ ಪಿ.ಬಿ.ಶ್ರೀನಿವಾಸನ್ ದಿನಾಂಕ 18-06-1953ರಂದು ಬರೆದ ಪತ್ರ ಇಂತಿದೆ.

[ನಾಗೇಶರಾಯರ ಸಂಗ್ರಹದಲ್ಲಿ ಸಂಪಾದಕರ ಕರಡು ಬರಹ ಮತ್ತು ಟೈಪ್ ಆದ ಪ್ರತಿಗಳು ಇವೆ. - ಸಂ.]

18-06-1953

Dear Sir,

Since it is the policy of our paper not to accept complimentary passes, we return herewith the pass so kindly sent. We readily appreciate your courtesy and gesture. We will buy tickets and attend the performances as that would obviate many difficulties.

Thanking you,

Yours faithfully,

Editor, 'Tayi Nadu'

No comments: