- ಹಾಲ್ದೊಡ್ಡೇರಿ ಸುಧೀಂದ್ರ
ಸ್ವಾತಂತ್ರ್ಯೋತ್ತರ ಕನ್ನಡ ಪತ್ರಿಕಾರಂಗಕ್ಕೆ ಹೆಚ್.ಆರ್.ನಾಗೇಶರಾವ್ ಅವರ ಕೊಡುಗೆ ಅಪಾರ. ಪತ್ರಕರ್ತರ ಸಂಘಟನೆಗಳನ್ನು ಕಟ್ಟುವಲ್ಲಿ, ಕನ್ನಡ ಪತ್ರಿಕೆಗಳನ್ನು ಬೆಳೆಸುವಲ್ಲಿ ಅವರು ಪಟ್ಟ ಶ್ರಮ ಸ್ಮರಣೀಯ. ಸ್ವಯಂ ಶಿಸ್ತಿನಿಂದ ಅಚ್ಚುಕಟ್ಟಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿದ ಈ ಅಪರೂಪದ `ಸುದ್ದಿಜೀವಿ', ಪ್ರಚಾರಕ್ಕೆಂದೂ ಹಾತೊರೆಯಲಿಲ್ಲ. `ಕಾಲ'ನ ಕರೆಗೆ ಓಗೊಡುವ ಮುನ್ನವೂ ಪತ್ರಿಕಾ ಸಂಪಾದಕರ ಸಂಕಷ್ಟಗಳನ್ನು ನೆನೆಪಿಸಿಕೊಂಡವರು.
ಬೆಂಗಳೂರಿನ ಮಾವಳ್ಳಿ ಕೆರೆಯಂಗಳ ಜರ್ನಲಿಸ್ಟ್ಸ್ ಕಾಲನಿಯಾಗಿದ್ದು ಬಹುಶಃ ಐವತ್ತರ ದಶಕದ ಆರಂಭದಲ್ಲಿರಬೇಕು. ಸ್ವಾತಂತ್ರ್ಯೋತ್ತರ ಕಾಲದ ಪತ್ರಕರ್ತರಿಗೆ ನಿಲ್ಲಲೊಂದು `ನೆಲೆ', ದುಡಿಮೆಗೆ ತಕ್ಕ `ಬೆಲೆ' ಒದಗಿಸಲು ಒಂದಷ್ಟು ಯುವಕರು ಏರುತ್ಸಾಹದಲ್ಲಿ ದುಡಿಯುತ್ತಿದ್ದರು. ಆ ಪತ್ರಕರ್ತರ ದಂಡಿನಲ್ಲಿದ್ದವರು `ನಮ್ಮಣ್ಣ' ಹೆಚ್.ಆರ್.ನಾಗೇಶರಾವ್. ಅವರೆಲ್ಲರ ಪರಿಶ್ರಮದಿಂದ ಸಾಮಾಜಿಕ ಸ್ನೇಹ ಸಂಘಟನೆಯಾಗಿದ್ದ ಮೈಸೂರು ಜರ್ನಲಿಸ್ಟ್ಸ್ ಅಸೋಸಿಯೇಶನ್‍ಗೆ ಕಾರ್ಯನಿರತ ಪತ್ರಕರ್ತರ ಸಂಘವೆಂಬ ಕಾರ್ಮಿಕ ಸಂಘಟನೆಯ ರೂಪ ಬಂತು. ಇದೇ ಸಮಯದಲ್ಲಿ ಮಿತ್ರರೊಂದಿಗೆ ಅವರು ಹುಟ್ಟಿಹಾಕಿದ್ದು ಪತ್ರಕರ್ತರ ಸಹಕಾರ ಸಂಘ. ಈ ಸಂಸ್ಥೆಗಳೊಂದಿಗೆ ಹತ್ತಿರದ ಒಡನಾಟವಿಟ್ಟುಕೊಂಡಿದ್ದ ಪತ್ರಕರ್ತರೆಲ್ಲ ಇದೇ ಕಾಲನಿಯಲ್ಲಿ ವಾಸವಾಗಿದ್ದರು. ನಾನು ಹುಟ್ಟುವ ವೇಳೆಗೆ ಬೆಂಗಳೂರಿನಲ್ಲಿ ಇದೊಂದು `ಗೌರವಸ್ಥ'ರ ಕಾಲನಿಯಾಗಿತ್ತು.

ಬಾಲ್ಯವನ್ನು ಅಲ್ಲೇ ಕಳೆದ ನನಗೆ ಶಾಲೆಯಲ್ಲಿದ್ದಾಗಿನಿಂದಲೂ `ಅಣ್ಣ' ಎಂದರೆ ಒಂದು ಬಗೆಯ ಭಯಮಿಶ್ರಿತ ಕುತೂಹಲ. ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ಹೆಚ್ಚಿನವರೊಂದಿಗೆ ಬೆರೆಯುತ್ತಿರಲಿಲ್ಲ. ಅವರಿಗಿದ್ದದ್ದು ಸೀಮಿತ ಮಿತ್ರವೃಂದ. ಆದರೆ ಮನೆಗೆ ಅವರ ಮಿತ್ರರು ಯಾರೇ ಬಂದರೂ, ನನಗೆ ಮೈಯ್ಯೆಲ್ಲಾ ಕಿವಿ. `ಇಂದು ದಾರಿಯಲ್ಲಿ ಮಾತಾಡ್ಸಿದ್ದು ಜೀವಣ್ಣರಾವ್, ನಿನ್ನೆ ಬಾಗಿಲಲ್ಲೇ ಸಿಕ್ಕವ್ರು ಎಸ್ಸಾರ್ಕೆ, ಮೊನ್ನೆ ಯೂನಿಯನ್ ಬಗ್ಗೆ ಮಾತಾಡೋಕ್ಕೆ ಬಂದವ್ರು ಆರ್.ಶಾಮಣ್ಣ. ಇವತ್ತು ಲೇಖನಕ್ಕೆ ಹೇಳಿಕಳುಹಿಸಿದ್ದು `ಕಿಡಿ' ಶೇಷಪ್ಪ, ಅಕ್ಕನ್ನ ಎತ್ಕೊಂಡಿದ್ದು `ಚಿತ್ರಗುಪ್ತ'ದ ಭಾರದ್ವಾಜ್, `ಜ್ವಾಲಾಮುಖಿ' ಪತ್ರಿಕೆಗೆ ಮೊದಲ ಸಂಪಾದಕೀಯ ಬರೆದದ್ದು ನಮ್ಮಣ್ಣ ಅಂತೆ, ನಮ್ಮನೆ ಮಹಡಿ ಹತ್ತುವಾಗ ಶಾಮರಾಯರಿಗೆ ಕೊಂಚ ತಲೆ ತಗುಲಿತಂತೆ, ನಿರಂಜನರ ಪುಸ್ತಕದ ಬಗ್ಗೆ ನಮ್ಮಣ್ಣ ಮಾಡಿದ ವಿಮರ್ಶೆ ಅವರಿಗೆ ಹಿಡಿಸಲಿಲ್ಲವಂತೆ, ಅರ್ಚಕ ವೆಂಕಟೇಶ್ ರಜೆ ಚೀಟಿ ಕಳಿಸಿದ್ದಾರಂತೆ, ಮತ್ತೂರು ಕೃಷ್ಣಮೂರ್ತಿ ಜಾಕೀರ್ ಹುಸೇನ್ ಬಗ್ಗೆ ಪುಸ್ತಕ ಬರೆದಿದ್ದಾರಂತೆ, ಮುಂದಿನವಾರ ಜಯಶೀಲರಾವ್ ಜೊತೆ ಮದ್ರಾಸಿಗೆ ಹೋಗ್ತಾರಂತೆ, ಆನಂದ ವಿಹಾರ್ ಟ್ರಾವಲ್ಸ್‍ನ ಜಿ.ಎ.ನರಸಿಂಹ ಮೂರ್ತಿಗಳು ಹಿಂದೆ `ಕತೆಗಾರ' ಪತ್ರಿಕೆ ನಡೆಸುತ್ತಿದ್ದರಂತೆ, `ವಿನೋದ' ಪತ್ರಿಕೆಗೆ ಅಣಕವಾಡು ಬರೆದು ಕೊಡಿರೆಂದು ಜಿ.ನಾರಾಯಣ ಪತ್ರ ಬರೆದಿದ್ದಾರಂತೆ .......`. ಇಂಥ ಮಾತುಗಳು ಕಿವಿಗೆ ಹಿತವಾಗಿದ್ದರೂ ಅರ್ಥವಾಗುತ್ತಿರಲಿಲ್ಲ. ಅಂದಿನ ಕನ್ನಡ ಪತ್ರಿಕಾ ಜಗತ್ತಿನಲ್ಲಿ ಇವರೆಲ್ಲ ಘಟಾನುಘಟಿಗಳೆಂಬ ಕಲ್ಪನೆ ನನಗೆ ಕಿಂಚಿತ್ತೂ ಇರಲಿಲ್ಲ. ತಮ್ಮ ಬಗ್ಗೆ ಹೇಳಿಕೊಳ್ಳುವುದಕ್ಕೆ ತೀರಾ ಸಂಕೋಚ ಪಡುತ್ತಿದ್ದ ನಮ್ಮಣ್ಣನ ಬಗ್ಗೆ ಎಷ್ಟೋ ವಿಷಯಗಳು ನಿನ್ನೆ ಮೊನ್ನೆಯವರೆಗೆ ನನಗೂ ತಿಳಿದಿರಲಿಲ್ಲ. ಅಸಲಿಗೆ ನನ್ನ ಶಾಲೆಯ ದಾಖಲೆಗಳಲ್ಲಿ ಅಪ್ಪನ ಉದ್ಯೋಗ ಕೇವಲ 'ಜರ್ನಲಿಸ್ಟ್`. ಕಾರ್ಯನಿರತ ಪತ್ರಕರ್ತರ ಸಂಘದ ಆಹ್ವಾನ ಪತ್ರಿಕೆಯೊಂದರಲ್ಲಿ 'ಅಣ್ಣ`ನ ಹೆಸರಿನಡಿ 'ಸುದ್ದಿ ಸಂಪಾದಕ, ಸಂಯುಕ್ತ ಕರ್ನಾಟಕ` ಎಂಬ ಪದ ಪುಂಜ ಕಂಡಾಗ 'ಅಣ್ಣ, ಸುದ್ದಿ ಸಂಪಾದಕ ಅಂದರೇನು`? ಎಂಬ ಬಾಲಿಶ ಪ್ರಶ್ನೆ ನನ್ನದು. ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ನನ್ನ ತಲೆಗೆ ಅವರು ಕೊಟ್ಟ ವಿವರಣೆಗಳಿಂದ ತಿಳಿದದ್ದು, ನಮ್ಮಣ್ಣ ಸಂಪಾದಕರಿಗಿಂತ ಹೆಚ್ಚಿನ ಜವಾಬ್ದಾರಿಯುಳ್ಳ ಹುದ್ದೆಯಲ್ಲಿದ್ದಾರೆ ಎಂದು.
1985ರ ಕೊನೆ. ಅವರು "ಸಂಯುಕ್ತ ಕರ್ನಾಟಕ"ದಿಂದ ನಿವೃತ್ತರಾಗಿ ಕೆಲವೇ ದಿನಗಳು ಉರುಳಿದ್ದವು. ಪುಟ್ಟ ಹಳ್ಳಿಯೊಂದರ ತೀರಾ ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರು ಪತ್ರಕರ್ತರಾಗಿದ್ದು ಹೇಗೆ? ಮತ್ತು ಏಕೆ? ಬಹುದಿನಗಳಿಂದ ನನ್ನನ್ನು ಕಾಡುತ್ತಿದ್ದ ಪ್ರಶ್ನೆಗಳಿಗೆ ಅವರಿಂದಲೇ ಉತ್ತರ ಪಡೆಯುವ ಮನಸ್ಸಾಯಿತು. ಹೀಗೊಂದು ದಿನ ಕೇಳಿಯೇ ಬಿಟ್ಟೆ. ಅವರ ನೆನಪು ಹಿಂದಕ್ಕೋಡಿತು. ಮಧುಗಿರಿಯಲ್ಲಿ ಜನಿಸಿದ ನಮ್ಮಣ್ಣ, ಆರು (ಮೂರು ಹೆಣ್ಣು, ಮೂರು ಗಂಡು) ಮಕ್ಕಳಲ್ಲಿ ನಾಲ್ಕನೆಯವರು. ಮಕ್ಕಳ ಶಾಲಾ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ತುಮಕೂರಿನಲ್ಲಿ ಬಾಡಿಗೆ ಮನೆ ಹಿಡಿದಿದ್ದರು ಅವರಮ್ಮ. ಗೆಳೆಯರೆಲ್ಲರ ಪ್ರೀತಿಯ `ನಾಗೇಶ' ಪ್ರೌಢಶಾಲೆಯಲ್ಲಿದ್ದಾಗ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ವಿಶೇಷ ಪ್ರಭುತ್ವ ಪಡೆದಿದ್ದ ಅವರು ಶಾಲೆಯ ಎಲ್ಲ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಭಾಗಿಯಾಗುತ್ತಿದ್ದರು. ತಮ್ಮ ಮೊದಲ ಇಂಗ್ಲಿಷ್ ಕವನಗಳ (ಕೈಬರಹದ) ಸಂಕಲನವನ್ನು 1941ರಲ್ಲಿ ಪ್ರಕಟಿಸಿದರು. ಮುಂದೆ `ಸೋಮಾರಿ', `ಹಣೇಬರಹ', `ಚಿತ್ರಗುಪ್ತ' ಎಂಬ ಹಾಸ್ಯಪ್ರಧಾನ ಕೈಬರಹ ಪತ್ರಿಕೆಗಳನ್ನು ಸ್ಥಾಪಿಸಿ ಸಂಪಾದಕತ್ವವನ್ನು ವಹಿಸಿಕೊಂಡರು. ದೇಶದ ಸ್ವಾತಂತ್ರ್ಯ ಚಳವಳಿಯ ಚಟುವಟಿಕೆಗಳಲ್ಲಿ ಬಹುತೇಕ ವಿದ್ಯಾರ್ಥಿಗಳಂತೆ ಅವರಿಗೂ ವಿಶೇಷ ಆಸಕ್ತಿ. ಆ ಧೀರ ಹೋರಾಟದ ರೋಮಾಂಚಕ ವರದಿಗಳೊಂದಿಗೆ ಬರುತ್ತಿದ್ದ ಪತ್ರಿಕೆಗಳಿಗಾಗಿ ಕಾತರದಿಂದ ಕಾಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಪ್ರಮುಖ ವೃತ್ತಾಂತಗಳನ್ನು ಸಂಕಲಿಸಿ, ನಕಲು ಮಾಡಿ, `ಶರವಾಳ' ಎಂಬ ಕೈಬರಹ ಪತ್ರಿಕೆಯನ್ನು ಬರೆದು ಸುತ್ತಮುತ್ತ ಹಂಚುವ ಹವ್ಯಾಸ ಅವರಿಗಿತ್ತು. ಸ್ವಾತಂತ್ರ್ಯಕ್ಕೋಸ್ಕರ ನಡೆದ ಹೋರಾಟದಲ್ಲಿ ಭಾಗಿಯಾಗಿ ಪೊಲೀಸರಿಂದ ಸಾಕಷ್ಟು ಬಾರಿ ಪೆಟ್ಟು ತಿಂದಿದ್ದರು. 1944ರ ಆಸುಪಾಸು. ತುಮಕೂರಿನ ಸಿದ್ಧಗಂಗಾ ಕ್ಷೇತ್ರದಲ್ಲಿ ತಾಯಿನಾಡು ಪತ್ರಿಕೆಯ ಸ್ಥಾಪಕ ಪಿ. ಆರ್. ರಾಮಯ್ಯನವರ ಅಧ್ಯಕ್ಷತೆಯಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ. ನಮ್ಮಣ್ಣ ಈ ಸಮಾವೇಶಕ್ಕೆ ವಿದ್ಯಾರ್ಥಿ-ಸ್ವಯಂಸೇವಕ. ಸ್ವಾತಂತ್ರ್ಯದ ಕಹಳೆಯನ್ನೂದುತ್ತಿದ್ದ ಅಂದಿನ ಧೀಮಂತ ಪತ್ರಕರ್ತರನ್ನು ತೀರಾ ಹತ್ತಿರದಿಂದ ಕಂಡು, ಮಾತನಾಡಿಸುವ ಸದವಕಾಶ ಸಿಕ್ಕಿತು. ತಾವೂ ಒಬ್ಬ ಪತ್ರಕರ್ತರಾಗಬೇಕೆಂಬ ಹಂಬಲ ಅವರಿಗಾಗ ಚಿಗುರೊಡೆಯಿತು.

ತುಮಕೂರು ಸರ್ಕಾರಿ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಯಾಗಿದ್ದಾಗ ಅಲ್ಲಿನ "ಸನ್ಮಿತ್ರ ಸಂಘ"ಕ್ಕೆ ಅವರೊಬ್ಬ ಕ್ರಿಯಾಶೀಲ ಸದಸ್ಯ. ಈ ಸಮಯದಲ್ಲೇ `ಸನ್ಮಿತ್ರ' ಎಂಬ ಕೈಬರಹದ ಪತ್ರಿಕೆಯನ್ನು ಕೆಲಕಾಲ ನಡೆಸಿಕೊಂಡು ಬಂದರು.ವೇದಿಕೆ ಸಿಕ್ಕ ಸಂಭ್ರಮದಲ್ಲಿ ಕನ್ನಡ ಭಾಷಾಭಿಮಾನ ಕಾರ್ಯಕ್ರಮಗಳನ್ನು ಸತತವಾಗಿ ಹಮ್ಮಿಕೊಂಡರು. ಅವರ ಚಟುವಟಿಕೆಗಳಿಗೆ ಇಂಬುಕೊಟ್ಟವರು ಅಂದು ಕಾಲೇಜಿನ ಅಧ್ಯಾಪಕರುಗಳಾಗಿದ್ದ ಜಿ. ಪಿ. ರಾಜರತ್ನಂ ಮತ್ತು ಎಸ್. ವಿ. ಪರಮೇಶ್ವರ ಭಟ್ಟರು. ಇವರ ಮಾರ್ಗದರ್ಶಿತ್ವದಲ್ಲಿ ನಾಡು-ನುಡಿಗಳ ಹಿರಿಮೆ-ಗರಿಮೆಗಳ ಬಗ್ಗೆ ವಿಶೇಷ ಅಧ್ಯಯನಕ್ಕೆ ಸುವರ್ಣಾವಕಾಶ ಸಿಕ್ಕಿತು. ರಾಜರತ್ನಂ ಸಂಪಾದಿಸುತ್ತಿದ್ದ "ವಿದ್ಯಾರ್ಥಿ ವಿಚಾರ ವಿಲಾಸ"ದಲ್ಲಿ ನಮ್ಮಣ್ಣನ ಚೊಚ್ಚಲ ಬರಹಗಳು ಪ್ರಕಟವಾದವು.
1945ರ ಬೇಸಗೆ. ನಮ್ಮಣ್ಣ ವಿಜ್ಞಾನ ವಿಷಯದ ಇಂಟರ್‌ಮೀಡಿಯಟ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರಂತೆ. ಬಿ.ಎಸ್‍ಸಿ ಸೇರಲು ಬೆಂಗಳೂರಿಗೆ ಹೊರಟರು. ಆ ವರ್ಷದ ತರಗತಿಗಳು ಆಗಲೇ ಆರಂಭವಾಗಿದ್ದವು. ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವತನಕ ಸುಮ್ಮನಿರಲು ಬಯಸದೆ ವೈಟ್‍ಫೀಲ್ಡ್‍ನಲ್ಲಿದ್ದ ಮಿಲಿಟರಿ ವಾಹನ ಡಿಪೋನಲ್ಲಿ ತಾತ್ಕಾಲಿಕ ಉದ್ಯೋಗವನ್ನು ಹಿಡಿದರು. ಉದ್ಯೋಗ ಮುಗಿಸಿ ಒಂದು ದಿನ ಕಾಲ್ನಡಿಗೆಯಲ್ಲಿ ಮನೆಗೆ ಹಿಂದಿರುಗುತ್ತಿದ್ದಾರೆ. ದಾರಿಯಲ್ಲಿ ತುಮಕೂರಿನಲ್ಲಿದ್ದಾಗ ಪ್ರೌಢಶಾಲಾ ಮಾಸ್ತರರಾಗಿದ್ದ ಎ.ಟಿ.ಶಾಮಾಚಾರ್ ಅವರ ಅನಿರೀಕ್ಷಿತ ಭೇಟಿ. ಲೇಖಕನೊಬ್ಬ ಗುಮಾಸ್ತಗಿರಿಯಲ್ಲಿ ಕಳೆದುಹೋಗುತ್ತಿದಾನೆಂದು ವ್ಯಥೆ ಪಟ್ಟ ಮಾಸ್ತರು, ಆಪ್ತ ಸಲಹೆಯೊಂದನ್ನು ನೀಡಿದರು. ನಮ್ಮಣ್ಣನ ಜೀವನದಲ್ಲಿ ಅದೊಂದು ಹೊಸ ತಿರುವು. ಅಂದು ಆ ಆತ್ಮೀಯ ಗುರುಗಳು ಬೆಂಗಳೂರಿನಲ್ಲಿ ಪತ್ರಕರ್ತರಾಗಿದ್ದರು. ಅವರ ಸ್ಫೂರ್ತಿ ಮತ್ತು ಒತ್ತಾಸೆಯಿಂದ ಅಂದಿನ ಜನಪ್ರಿಯ ದೈನಿಕ "ತಾಯಿನಾಡು" ಪತ್ರಿಕಾ ಕಚೇರಿಗೆ ನಮ್ಮಣ್ಣ ಕಾಲಿಟ್ಟರು. ಮಾಲೀಕ ಪಿ. ಆರ್. ರಾಮಯ್ಯ ಹಾಗೂ ಸಂಪಾದಕ ಪಿ. ಬಿ. ಶ್ರೀನಿವಾಸನ್‍ರೊಂದಿಗೆ ಸಂದರ್ಶನದ ಅವಕಾಶ ಸಿಕ್ಕಿತು. ಪತ್ರಿಕೆಯ ಉಪಸಂಪಾದಕನಾಗಿ 1946ರ ಜನವರಿ 4ರಂದು ನೇಮಕವಾಯಿತು. ವರ್ಷ ಉರುಳುವುದರೊಳಗೆ ಮನೆಯಲ್ಲಿ ಒಂದಾದ ಮೇಲೊಂದರಂತೆ ಆಘಾತಗಳ ಸರಮಾಲೆ. ವ್ಯಾಸಂಗ ಮುಂದುವರಿಸುವುದಿರಲಿ, ಸಂಸಾರ ತೂಗಿಸಲು ಉದ್ಯೋಗವೊಂದನ್ನು ಹಿಡಿಯಲೇಬೇಕಾದ ಅನಿವಾರ್ಯತೆ. ಮುಂದಿನ ವ್ಯಾಸಂಗ ಯೋಜನೆಗೆ ವಿರಾಮ ಬಿತ್ತು.
ಉತ್ಸಾಹದಿಂದ ಕೆಲಸ ಕಲಿಯುತ್ತ ಅಹರ್ನಿಶಿ ದುಡಿಯುತ್ತಿದ್ದ ನಮ್ಮಣ್ಣನಿಗೆ ಅಂದಿನ ಸಂಪಾದಕೀಯ ವರ್ಗದಿಂದ ಸತತ ಉತ್ತೇಜನ. "ತಾಯಿನಾಡು" ಪತ್ರಿಕೆಯ ವಿವಿಧ ವಿಭಾಗಗಳಲ್ಲಿ ಕಾರ್ಯಭಾರ ನಡೆಸುವ ಸದವಕಾಶ ಸಿಕ್ಕಿತು. ಅಗ್ರಲೇಖನ ಬರಹಗಳೊಂದಿಗೆ "ಪುಸ್ತಕ ಪ್ರಿಯ" ಹೆಸರಿನಲ್ಲಿ ಗ್ರಂಥ ವಿಮರ್ಶೆಗೂ ಅನುವು. ಮುಂದೆ "ನಾರದ ಉವಾಚ" ಎಂಬ ದೈನಂದಿನ ಹಾಸ್ಯ-ಟೀಕಾಂಕಣದ ಉಸ್ತುವಾರಿ. ಪತ್ರಿಕೆ ಮತ್ತು ನಮ್ಮಣ್ಣ ಏರುತ್ಸಾಹದಲ್ಲಿರುವಾಗಲೇ, ತಾಯಿನಾಡು ಮಾಲೀಕತ್ವ ಹಸ್ತಾಂತರವಾಯಿತು. ತಾವು ನಂಬಿದ್ದ ಧ್ಯೇಯಗಳಿಗೆ ಈ ಬದಲಾವಣೆ ಒಗ್ಗದೆ ರಾಜೀನಾಮೆ ನೀಡಿದರು. ಮೆಚ್ಚಿನ "ತಾಯಿನಾಡು" ಪತ್ರಿಕೆಗೆ 1958ರ ಆಗಸ್ಟ್ 31ರಂದು ದುಗುಡದ ವಿದಾಯ ಕೋರಿದರು.
ಈ ಸಮಯದಲ್ಲಿ ಬೆಂಗಳೂರಿನಲ್ಲೊಂದು ಆವೃತ್ತಿಯನ್ನು ಪ್ರಾರಂಭಿಸಲು ಹುಬ್ಬಳ್ಳಿಯ ಅಗ್ರಗಣ್ಯ ದೈನಿಕ "ಸಂಯುಕ್ತ ಕರ್ನಾಟಕ" ನಿರ್ಧರಿಸಿತ್ತು. ಪತ್ರಿಕೆಯ `ಹಿರಿಯ ಉಪಸಂಪಾದಕ'ರಾಗಿ ನಮ್ಮಣ್ಣ ಸೇರ್ಪಡೆಯಾದರು. ಅಂದು ಪತ್ರಿಕೆಯ ಸಂಪಾದಕರಾಗಿದ್ದ ರಂಗನಾಥ ದಿವಾಕರರ ಮಾರ್ಗದರ್ಶನದೊಂದಿಗೆ ಪತ್ರಿಕೆಯೊಂದಿಗೇ ಬೆಳೆಯಲು ವಿಫುಲ ಅವಕಾಶಗಳು ಸಿಕ್ಕವು. ಅತಿ ಶೀಘ್ರದಲ್ಲೇ `ಮುಖ್ಯ ಉಪಸಂಪಾದಕ' ಹುದ್ದೆಗೇರಿದರು.
ಈ ಸಮಯದಲ್ಲೇ ದೆಹಲಿಯ ಪ್ರೆಸ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ (1965) ಪ್ರೌಢ ತರಬೇತಿ. ಮುಂದೆ 1966ರಲ್ಲಿ `ಸುದ್ದಿ ಸಂಪಾದಕ'ತ್ವದ ಹೊಣೆಗಾರಿಕೆ. ಜೊತೆಗೆ ಪತ್ರಿಕೆಯ ಬಹುತೇಕ ಜಆಬ್ದಾರಿಗಳ ನಿರ್ವಹಣೆ. ಪತ್ರಿಕೆಯಲ್ಲಿ ಹಲವಾರು ವರ್ಷ "ಚಿಟಿಕೆ-ಚಪ್ಪರ" ಟೀಕಾಂಕಣ ಬರಹದೊಂದಿಗೆ ಹಾಸ್ಯ ಲೇಖನಗಳ ಸರಮಾಲೆ ಸೃಷ್ಟಿಸಿದರು.
ಅಗ್ರಲೇಖನಗಳ ಬರಹದೊಂದಿಗೆ "ಸುದ್ದಿಜೀವಿ" ಹೆಸರಿನಲ್ಲಿ "ವಾರ್ತಾವಲೋಕನ" - ಹೀಗೆ ಪತ್ರಿಕೆಯ ಸರ್ವತೋಮುಖ ಹೊಣೆಗಾರಿಕೆ. ತಾಯಿನಾಡುವಿಗಾದಂತೆ ಎಂಬತ್ತರ ದಶಕದಲ್ಲಿ ಈ ಪತ್ರಿಕೆಯಲ್ಲೂ ಮಾಲೀಕತ್ವದ ಹಸ್ತಾಂತರ - ಜೊತೆಗೆ ವಿವಾದಗಳ ಅಗ್ನಿ ಪರೀಕ್ಷೆ. ನನ್ನಕ್ಕನ ಮದುವೆಗೆ ಇಪ್ಪತ್ತು ದಿನಗಳಿರುವಾಗಲೇ `ಸಂಯುಕ್ತ ಕರ್ನಾಟಕ'ದ ಬೆಂಗಳೂರಿನ ಆವೃತ್ತಿ 1980ರ ಜನವರಿಯಲ್ಲಿ ಅನಿರೀಕ್ಷಿತವಾಗಿ ಕದ ಮುಚ್ಚಿತು. ಮುಚ್ಚಿದ ಬಾಗಿಲು ತೆಗೆಸಲು ಅವಿಶ್ರಾಂತ ಹೋರಾಟ. ಮುಂಚೂಣಿಯಲ್ಲಿದ್ದು `ಸಂಯುಕ್ತ ಕರ್ನಾಟಕ ನೌಕರರ ಸಂಘ'ದ ಸ್ಥಾಪನೆ. ಆ ಮೂಲಕ ಹೋರಾಟ ನಡೆಸಿದ ಹತ್ತು ತಿಂಗಳ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಂತೆ ಒಂದಷ್ಟು ನೆಮ್ಮದಿ. ಮತ್ತೆ ತಮ್ಮ ಎಂದಿನ ಸುದ್ದಿ ಸಂಪಾದಕತ್ವದಲ್ಲಿ ಕಾರ್ಯಮಗ್ನ. ಮುಂದೆ 1983ರಲ್ಲಿ `ಸಹಾಯಕ ಸಂಪಾದಕ'ರಾಗಿ, 1984ರಲ್ಲಿ `ಸ್ಥಾನಿಕ ಸಂಪಾದಕ'ರಾಗಿ ಪತ್ರಿಕೆಯನ್ನು ಮುನ್ನಡೆಸಿದರು. 1985ರ ಅಕ್ಟೋಬರ್ 31ರಂದು ಪತ್ರಿಕಾ ವೃತ್ತಿಗೆ ಅಭಿಮಾನಪೂರ್ಣ ವಿದಾಯ.
ಮನೆಯಲ್ಲಿದ್ದ `ನ್ಯಾಶನಲ್ ಎಕ್ಕೊ' ರೇಡಿಯೊ ಬಗ್ಗೆ ಅವರಿಗೆ ಅದಂಯ ಪ್ರೀತಿ. ಮನೆಯಲ್ಲಿ ಎಲ್ಲಿದ್ದರೂ ಸರಿ, ಸುದ್ದಿಯ ಸಮಯಕ್ಕೆ ಅದರ ಮುಂದೆ ಅವರು ಹಾಜರು. ಐವತ್ತರ ದಶಕದಲ್ಲಿ ಆಕಾಶವಾಣಿಗೆಂದು ನಮ್ಮಣ್ಣ ಬರೆದ `ನಾರಿಲೋಕದಲ್ಲಿ ನಾರದರು' ನಾಟಕಕ್ಕೆ ಬಹುಮಾನ ಬಂದಿತ್ತಂತೆ. ಆ ನಾಟಕ ಪ್ರಸಾರವಾಗುವ ಹೊತ್ತಿಗೆ ನಮ್ಮ ಮನೆಗೆ ಈ ರೇಡಿಯೊ ಬಂತಂತೆ. ಮುಂದೆ ಅದೇ ನಾಟಕದ ವಿಸ್ತೃತ ರೂಪ ಅವರದೇ ಆದ `ಚಾತಕ ಪ್ರಕಾಶನ'ದಲ್ಲಿ ಬೆಳಕು ಕಂಡಿತು. `ತಾಯಿನಾಡು'ವಿನಲ್ಲಿದ್ದಾಗ ನಿತ್ಯ ಬರೆಯುತ್ತಿದ್ದ `ನಾರದ ಉವಾಚ'ದ ಕೊನೆಯಲ್ಲಿ ಹಾಸ್ಯ ಚಟಾಕಿಯೊಂದಿರುತ್ತಿತ್ತು. ಆ
ಚಟಾಕಿಗಳ ಒಂದು ಸಂಕಲನ `ನಗೆ ನಾಣ್ಯ' ಹೆಸರಿನಲ್ಲಿ ಪ್ರಕಟವಾಯಿತು. ಈ ಪುಸ್ತಕಕ್ಕೆ ರಕ್ಷಾಪುಟವನ್ನು ಅವರೇ ರಚಿಸಿದ್ದರು. ಮುಂದೆ ಅವರು ಪ್ರಕಟಿಸಿದ್ದು ತಮ್ಮ ಹಾಸ್ಯಲೇಖನಗಳ ಒಂದು ಪ್ರಾತಿನಿಧಿಕ ಸಂಕಲನ `ನಗೆ ಬಾಂಬ್'. ಪಾಕೆಟ್ ಪುಸ್ತಕಗಳು ಭರಾಟೆಯಲ್ಲಿದ್ದ ಕಾಲವದು. `ಮಧುಕರ' ಕಾವ್ಯನಾಮದಲ್ಲಿ `ಹಿತಶತ್ರು', `ಸೂತ್ರಧಾರಿ', `ರಕ್ತದ ಮಡುವಿನಲ್ಲಿ' ಮತ್ತು `ಭಯ ಪಿಶಾಚಿ'ಗಳೆಂಬ ಪತ್ತೇದಾರಿ ಕಾದಂಬರಿಗಳನ್ನು `ಸೀತಾಪತಿ' ಹೆಸರಿನಲ್ಲಿ `ಕಂಕಣದ ಸಂಕಲ್ಪ' ಎಂಬ ಸಾಮಾಜಿಕ ನಾಟಕವನ್ನು ತಾವೇ ಪ್ರಕಟಿಸಿದರು. "ಎನ್.ಎ", "ನಾ" ಮುಂತಾದ ಕಾವ್ಯನಾಮಗಳೊಂದಿಗೆ "ಚಿತ್ರಗುಪ್ತ" ವಾರಪತ್ರಿಕೆ ಮತ್ತು "ವಿನೋದ", "ನಗುವನಂದ", "ವಿಕಟವಿನೋದಿನಿ" ಮುಂತಾದ ಮಾಸಪತ್ರಿಕೆಗಳಲ್ಲಿ ಹಾಸ್ಯ ಬರಹಗಳ ಮಹಾಪೂರ ಹರಿಸಿದರು. "ಆನಂದ ಜ್ಯೋತಿ" ಮಾಸಪತ್ರಿಕೆಯಲ್ಲಿ ಅವರು ನಿರೂಪಿಸುತ್ತಿದ್ದ ರಾಜಕೀಯ ಮುಖಂಡರುಗಳೊಂದಿಗಿನ ಕಾಲ್ಪನಿಕ ಭೇಟಿಗಳು ಜನಪ್ರಿಯವಾಗಿದ್ದವು. "ರಾಮರಾಜ್ಯ" (ಪಾಕ್ಷಿಕ), "ವಿಶ್ವಬಂಧು" (ಸಾಪ್ತಾಹಿಕ), "ವಿಜಯಮಾಲಾ" (ಮಾಸಿಕ) ಹಾಗೂ "ಕತೆಗಾರ" (ಮಾಸಿಕ) ಪತ್ರಿಕೆಗಳಲ್ಲಿ ಆಗ್ಗಿಂದಾಗ್ಗೆ ಲಘು-ವೈಚಾರಿಕ-ವಾರ್ತಾವಲೋಕನ ಬರಹಗಳನ್ನು ರಚಿಸುತ್ತಿದ್ದರು. ಕೆಲಕಾಲ ತುಮಕೂರಿನ "ವಿಜಯವಾಣಿ" ಪತ್ರಿಕೆಗೆ "ಬಾರುಗೋಲು" ಎಂಬ ಸಾಪ್ತಾಹಿಕ ಟೀಕಾಂಕಣ ಬರೆಯುತ್ತಿದ್ದರು. ಆತ್ಮೀಯ ಸ್ನೇಹಿತ ಶೇಷಪ್ಪನವರ `ಕಿಡಿ' ಪತ್ರಿಕೆಗೆ ಆಗ್ಗಿಂದಾಗ್ಗೆ ಲೇಖನಗಳನ್ನು ಬರೆದುಕೊಡುತ್ತಿದ್ದರು. `ಜ್ವಾಲಾಮುಖಿ' ಪತ್ರಿಕೆಗೆ ಸಂಪಾದಕೀಯದ ಜತೆಗೆ ಬಿಸಿಮುಟ್ಟಿಸುವ ರಾಜಕೀಯ ಲೇಖನಗಳನ್ನು ಬರೆಯುತ್ತಿದ್ದರು. `ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ'ದ ನಿಯತಕಾಲಿಕ "ಪತ್ರಕರ್ತ`ದಲ್ಲಿ ಆಗ್ಗಿಂದಾಗ್ಗೆ 'ಸುದ್ದಿಜೀವಿ` ಹೆಸರಿನಲ್ಲಿ ಉದ್ಯಮಕ್ಕೆ ಸಂಬಂಧಿಸಿದ ಹಲವಾರು ಮೌಲಿಕ ಲೇಖನಗಳನ್ನು ಪ್ರಕಟಿಸಿದ್ದರು.

'ಮೈಸೂರು ಜರ್ನಲಿಸ್ಟ್ಸ್ ಅಸೋಸಿಯೇಶನ್`ನೊಂದಿಗೆ 1948ರಿಂದಲೂ ನಮ್ಮಣ್ಣ ನಿಕಟ ಸಂಪರ್ಕ ಹೊಂದಿದ್ದರು. ಅದನ್ನು ಕಾರ್ಮಿಕ ಹಕ್ಕೊತ್ತಾಯದ ಸಂಘವಾಗಿ (ಟ್ರೇಡ್ ಯೂನಿಯನ್) ಪರಿವರ್ತಿಸಲು, 1954ರಲ್ಲಿ ನೇಮಿತವಾಗಿದ್ದ ಅಂಗರಚನಾ ತಿದ್ದುಪಡಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಭಾರತ ಸರ್ಕಾರ ನೇಮಿಸಿದ್ದ "ಪತ್ರಕರ್ತರ ಪ್ರಥಮ ವೇತನ ಮಂಡಲಿ" ಮದ್ರಾಸಿನಲ್ಲಿ (1956) ಸಮಾವೇಶಗೊಂಡಾಗ, ರಾಜ್ಯ ಪತ್ರಕರ್ತರ ಸಂಘದ ಪರ ತ್ರಿಸದಸ್ಯ ನಿಯೋಗದಲ್ಲಿ ಒಬ್ಬರಾಗಿ ಪತ್ರಕರ್ತರ ವೇತನ ಬೇಡಿಕೆಗಳನ್ನು ಪ್ರತಿಪಾದಿಸಿದ್ದರು. ಮದ್ರಾಸ್, ಮುಂಬಯಿ, ಭೋಪಾಲ್ ಮುಂತಾದೆಡೆ ನಡೆದ ಭಾರತೀಯ ಪತ್ರಕರ್ತರ ಫೆಡರೇಷನ್ (ಐ.ಎಫ್.ಡಬ್ಲ್ಯೂ.ಜೆ) ಸಮಾವೇಶಗಳಲ್ಲಿ 'ಕೆ.ಯು.ಡಬ್ಲ್ಯೂ.ಜೆ` ಪರವಾಗಿ ಪಾಲ್ಗೊಂಡಿದ್ದರು. ಕೆಲಕಾಲ ಅಖಿಲ ಭಾರತ ವೃತ್ತಪತ್ರಿಕಾ ಸಂಪಾದಕರ ಸಮ್ಮೇಳನದ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಪತ್ರಿಕಾ ಮಾನ್ಯತಾ ಸಮಿತಿ ಹಾಗೂ ಕರ್ನಾಟಕ ಪತ್ರಿಕಾ ಅಕಾಡೆಮಿಗಳಲ್ಲಿ ಪ್ರಾತಿನಿಧ್ಯ ಪಡೆದಿದ್ದರು. ಅವರ ಸೇವೆಯನ್ನು ಗುರುತಿಸಿ ಕರ್ನಾಟಕ
ಪತ್ರಿಕಾ ಅಕಾಡೆಮಿಯು 5ನೇ ಫೆಬ್ರವರಿ 1999ರಂದು ರಾಯಚೂರಿನಲ್ಲಿ ನಡೆದ ಸಮಾರಂಭದಲ್ಲಿ ಪುರಸ್ಕರಿಸಿತ್ತು.
ಇಷ್ಟೆಲ್ಲಾ ಹಿರಿಮೆಯ ನಮ್ಮಣ್ಣನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತಿಲ್ಲವೆಂಬ ಅನಿಸಿಕೆ ನನ್ನದಾಗಿತ್ತು. ಆದರೆ ಅಂಥದೊಂದು ನಿರಾಸೆ ಅವರನ್ನೆಂದೂ ಕಾಡಿರಲೇ ಇಲ್ಲ. ತಮ್ಮ ನೆಚ್ಚಿನ ವೃತ್ತಿ ಅವರಿಗೆ ಸಂತೃಪ್ತಿ ತಂದಿತ್ತು. ಸುದ್ದಿಪತ್ರಿಕೆಗಳಲ್ಲಿ ಕೆಲಸ ಮಾಡುವವರು ಸದಾ ಹಿನ್ನೆಲೆಯಲ್ಲಿರಬೇಕು, ಪ್ರಚಾರಕ್ಕೆ ಹಾತೊರೆಯಬಾರದೆಂದು ಬಲವಾಗಿ ನಂಬಿದ್ದರವರು. ಪತ್ರಿಕೋದ್ಯಮವನ್ನು 'ಅಕ್ಯಾಡೆಮಿಕ್` ವಲಯದಲ್ಲಿ ಕಲಿಯದಿದ್ದರೂ ಪತ್ರಿಕೆಯೊಂದನ್ನು ಅಚ್ಚುಕಟ್ಟಾಗಿ ಹೇಗೆ ನಡೆಸಬೇಕೆಂಬ ಸ್ಫಷ್ಟ ಕಲ್ಪನೆ ಅವರಿಗಿತ್ತು. ಸುದ್ದಿಗಳ ಆಯ್ಕೆಯಲ್ಲಿ, ಶಿರೋನಾಮೆ ಕೊಡುವಲ್ಲಿ, ಸೂಕ್ತವಾಗಿ 'ಸಂಪಾದನೆ` ಮಾಡುವಲ್ಲಿ ಅವರಿಗೆ ಸಾಕಷ್ಟು ಪರಿಣತಿಯಿತ್ತು. ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಉತ್ತಮ ಪ್ರಭುತ್ವ ಹೊಂದಿದ್ದ ಅವರು, ಮೂಲಕ್ಕೆ ಚ್ಯುತಿ ಬರದಂತೆ ಲೇಖನಗಳಿಗೆ ಹೊಸ ರೂಪ ನೀಡಬಲ್ಲವರಾಗಿದ್ದರು. ಹೊಸದಾಗಿ ಪತ್ರಿಕೋದ್ಯಮ ಪ್ರವೇಶಿಸುವವರಿಗೆ ಅವರು ನೀಡುತ್ತಿದ್ದ ತರಬೇತಿ ಅತ್ಯಂತ ಆತ್ಮೀಯ ಮತ್ತು ಪರಿಪೂರ್ಣವಾಗಿದ್ದವು. ಅವರೊಂದಿಗೆ ಕೆಲಸ ಮಾಡಿದ ಅನೇಕ ಪತ್ರಕರ್ತರ ನೆನಪಿನಲ್ಲಿ ಅವರು ಇಂದಿಗೂ ಚಿರಸ್ಥಾಯಿ. ಕನ್ನಡ ದೈನಿಕ ಪತ್ರಿಕಾ ರಂಗದಲ್ಲಿ ನಾಲ್ಕು ದಶಕಗಳ ಅವಿಶ್ರಾಂತ ದುಡಿಮೆಯ, ರೋಮಾಂಚಕ ಅನುಭವಗಳ, ನಿತ್ಯ ಹೋರಾಟ ಜೀವನದ, ಸಿಹಿ - ಕಹಿ ನೆನಪುಗಳು ಅವರೊಂದಿಗಿದ್ದವು. ನಿವೃತ್ತಿಯ ನಂತರ ತಮ್ಮ ಸೀಮಿತ ಮಿತ್ರವೃಂದದೊಂದಿಗೆ ಮಾತ್ರ ಸಂಪರ್ಕ ಹೊಂದಿದ್ದರು. ಪತ್ರಿಕೆಗಳ ಓದಿನೊಂದಿಗೆ ದಿನದ ಬಹುಕಾಲ ಕಳೆಯುತ್ತಿದ್ದರು. ಹೆಚ್ಚೂ-ಕಮ್ಮಿ ಅವುಗಳೊಂದಿಗೇ ಜೀವಿಸುತ್ತಿದ್ದರು. ಕಳೆದ ತಿಂಗಳಷ್ಟೇ `ವಿನೋದ' ಹಾಸ್ಯ ಪತ್ರಿಕೆಯ ಸ್ವಾತಂತ್ರ್ಯೋತ್ಸವ ಸಂಚಿಕೆಗೆ ಲೇಖನ ಕಳುಹಿಸಿದ್ದರು. ಅವರು ಸಾಯುವ ಹಿಂದಿನ ರಾತ್ರಿ `ಮಿಗ್ ವಿಮಾನಗಳ ಅಪಘಾತ, ವಿಮಾನ ವಿಜ್ಝ್ನ್ಯಾನದಲ್ಲಿ ದೇಶದ ಮುನ್ನಡೆ .....' ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಕೊನೆಗೆ `ವಿಜಯ ಕರ್ನಾಟಕ'ದಲ್ಲಿನ ನನ್ನ ಸೋಮವಾರದ ಅಂಕಣಕ್ಕೆ ಲೇಖನ ಕಳುಹಿಸಿದ್ದಾಯಿತೆ? ಎಂದು ಪ್ರಶ್ನಿಸಿದ್ದರು. `ಸಂಪಾದಕರುಗಳ ಕಷ್ಟ ನಿನಗರ್ಥವಾಗುವುದಿಲ್ಲ. ಬೇಗ ಕಳುಹಿಸಿಬಿಡು' ಎಂದು ನೆನಪಿಸಿದ್ದರು. ತಮ್ಮನ್ನು ತಾವೇ ರೂಪಿಸಿಕೊಂಡ ನಮ್ಮಣ್ಣ, ಇಡೀ ಜೀವನವನ್ನು ಪತ್ರಿಕೋದ್ಯಮಕ್ಕೆ ಮುಡಿಪಾಗಿಟ್ಟಿದ್ದರು. ಅಪ್ಪಟ ಸ್ವಾಭಿಮಾನಿ ಮತ್ತು ಸ್ವಾವಲಂಬಿಯಾಗಿದ್ದ ನಮ್ಮಣ್ಣ ಆರೋಗ್ಯವಂತರಾಗಿದ್ದರು. ಆಗಸ್ಟ್ ಮೂರರ ಮುಂಜಾನೆ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾರೆಂಬ ಕಲ್ಪನೆ ನಮಗಷ್ಟೇ ಅಲ್ಲ, ಅವರಿಗೂ ಇರಲಿಲ್ಲ. ಈ ಅನಿರೀಕ್ಷಿತ ಸಾವಿನಿಂದ ಸ್ವಾತಂತ್ರ್ಯೋತ್ತರ ಕನ್ನಡ ಪತ್ರಿಕೋದ್ಯಮದ ಮಹತ್ವದ ಕೊಂಡಿಯೊಂದು ಕಳಚಿ ಬಿತ್ತು. ----
1945ರ ಬೇಸಗೆ. ನಮ್ಮಣ್ಣ ವಿಜ್ಞಾನ ವಿಷಯದ ಇಂಟರ್‌ಮೀಡಿಯಟ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರಂತೆ. ಬಿ.ಎಸ್‍ಸಿ ಸೇರಲು ಬೆಂಗಳೂರಿಗೆ ಹೊರಟರು. ಆ ವರ್ಷದ ತರಗತಿಗಳು ಆಗಲೇ ಆರಂಭವಾಗಿದ್ದವು. ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವತನಕ ಸುಮ್ಮನಿರಲು ಬಯಸದೆ ವೈಟ್‍ಫೀಲ್ಡ್‍ನಲ್ಲಿದ್ದ ಮಿಲಿಟರಿ ವಾಹನ ಡಿಪೋನಲ್ಲಿ ತಾತ್ಕಾಲಿಕ ಉದ್ಯೋಗವನ್ನು ಹಿಡಿದರು. ಉದ್ಯೋಗ ಮುಗಿಸಿ ಒಂದು ದಿನ ಕಾಲ್ನಡಿಗೆಯಲ್ಲಿ ಮನೆಗೆ ಹಿಂದಿರುಗುತ್ತಿದ್ದಾರೆ. ದಾರಿಯಲ್ಲಿ ತುಮಕೂರಿನಲ್ಲಿದ್ದಾಗ ಪ್ರೌಢಶಾಲಾ ಮಾಸ್ತರರಾಗಿದ್ದ ಎ.ಟಿ.ಶಾಮಾಚಾರ್ ಅವರ ಅನಿರೀಕ್ಷಿತ ಭೇಟಿ. ಲೇಖಕನೊಬ್ಬ ಗುಮಾಸ್ತಗಿರಿಯಲ್ಲಿ ಕಳೆದುಹೋಗುತ್ತಿದಾನೆಂದು ವ್ಯಥೆ ಪಟ್ಟ ಮಾಸ್ತರು, ಆಪ್ತ ಸಲಹೆಯೊಂದನ್ನು ನೀಡಿದರು. ನಮ್ಮಣ್ಣನ ಜೀವನದಲ್ಲಿ ಅದೊಂದು ಹೊಸ ತಿರುವು. ಅಂದು ಆ ಆತ್ಮೀಯ ಗುರುಗಳು ಬೆಂಗಳೂರಿನಲ್ಲಿ ಪತ್ರಕರ್ತರಾಗಿದ್ದರು. ಅವರ ಸ್ಫೂರ್ತಿ ಮತ್ತು ಒತ್ತಾಸೆಯಿಂದ ಅಂದಿನ ಜನಪ್ರಿಯ ದೈನಿಕ "ತಾಯಿನಾಡು" ಪತ್ರಿಕಾ ಕಚೇರಿಗೆ ನಮ್ಮಣ್ಣ ಕಾಲಿಟ್ಟರು. ಮಾಲೀಕ ಪಿ. ಆರ್. ರಾಮಯ್ಯ ಹಾಗೂ ಸಂಪಾದಕ ಪಿ. ಬಿ. ಶ್ರೀನಿವಾಸನ್‍ರೊಂದಿಗೆ ಸಂದರ್ಶನದ ಅವಕಾಶ ಸಿಕ್ಕಿತು. ಪತ್ರಿಕೆಯ ಉಪಸಂಪಾದಕನಾಗಿ 1946ರ ಜನವರಿ 4ರಂದು ನೇಮಕವಾಯಿತು. ವರ್ಷ ಉರುಳುವುದರೊಳಗೆ ಮನೆಯಲ್ಲಿ ಒಂದಾದ ಮೇಲೊಂದರಂತೆ ಆಘಾತಗಳ ಸರಮಾಲೆ. ವ್ಯಾಸಂಗ ಮುಂದುವರಿಸುವುದಿರಲಿ, ಸಂಸಾರ ತೂಗಿಸಲು ಉದ್ಯೋಗವೊಂದನ್ನು ಹಿಡಿಯಲೇಬೇಕಾದ ಅನಿವಾರ್ಯತೆ. ಮುಂದಿನ ವ್ಯಾಸಂಗ ಯೋಜನೆಗೆ ವಿರಾಮ ಬಿತ್ತು.

ಈ ಸಮಯದಲ್ಲಿ ಬೆಂಗಳೂರಿನಲ್ಲೊಂದು ಆವೃತ್ತಿಯನ್ನು ಪ್ರಾರಂಭಿಸಲು ಹುಬ್ಬಳ್ಳಿಯ ಅಗ್ರಗಣ್ಯ ದೈನಿಕ "ಸಂಯುಕ್ತ ಕರ್ನಾಟಕ" ನಿರ್ಧರಿಸಿತ್ತು. ಪತ್ರಿಕೆಯ `ಹಿರಿಯ ಉಪಸಂಪಾದಕ'ರಾಗಿ ನಮ್ಮಣ್ಣ ಸೇರ್ಪಡೆಯಾದರು. ಅಂದು ಪತ್ರಿಕೆಯ ಸಂಪಾದಕರಾಗಿದ್ದ ರಂಗನಾಥ ದಿವಾಕರರ ಮಾರ್ಗದರ್ಶನದೊಂದಿಗೆ ಪತ್ರಿಕೆಯೊಂದಿಗೇ ಬೆಳೆಯಲು ವಿಫುಲ ಅವಕಾಶಗಳು ಸಿಕ್ಕವು. ಅತಿ ಶೀಘ್ರದಲ್ಲೇ `ಮುಖ್ಯ ಉಪಸಂಪಾದಕ' ಹುದ್ದೆಗೇರಿದರು.

ಮನೆಯಲ್ಲಿದ್ದ `ನ್ಯಾಶನಲ್ ಎಕ್ಕೊ' ರೇಡಿಯೊ ಬಗ್ಗೆ ಅವರಿಗೆ ಅದಂಯ ಪ್ರೀತಿ. ಮನೆಯಲ್ಲಿ ಎಲ್ಲಿದ್ದರೂ ಸರಿ, ಸುದ್ದಿಯ ಸಮಯಕ್ಕೆ ಅದರ ಮುಂದೆ ಅವರು ಹಾಜರು. ಐವತ್ತರ ದಶಕದಲ್ಲಿ ಆಕಾಶವಾಣಿಗೆಂದು ನಮ್ಮಣ್ಣ ಬರೆದ `ನಾರಿಲೋಕದಲ್ಲಿ ನಾರದರು' ನಾಟಕಕ್ಕೆ ಬಹುಮಾನ ಬಂದಿತ್ತಂತೆ. ಆ ನಾಟಕ ಪ್ರಸಾರವಾಗುವ ಹೊತ್ತಿಗೆ ನಮ್ಮ ಮನೆಗೆ ಈ ರೇಡಿಯೊ ಬಂತಂತೆ. ಮುಂದೆ ಅದೇ ನಾಟಕದ ವಿಸ್ತೃತ ರೂಪ ಅವರದೇ ಆದ `ಚಾತಕ ಪ್ರಕಾಶನ'ದಲ್ಲಿ ಬೆಳಕು ಕಂಡಿತು. `ತಾಯಿನಾಡು'ವಿನಲ್ಲಿದ್ದಾಗ ನಿತ್ಯ ಬರೆಯುತ್ತಿದ್ದ `ನಾರದ ಉವಾಚ'ದ ಕೊನೆಯಲ್ಲಿ ಹಾಸ್ಯ ಚಟಾಕಿಯೊಂದಿರುತ್ತಿತ್ತು. ಆ

'ಮೈಸೂರು ಜರ್ನಲಿಸ್ಟ್ಸ್ ಅಸೋಸಿಯೇಶನ್`ನೊಂದಿಗೆ 1948ರಿಂದಲೂ ನಮ್ಮಣ್ಣ ನಿಕಟ ಸಂಪರ್ಕ ಹೊಂದಿದ್ದರು. ಅದನ್ನು ಕಾರ್ಮಿಕ ಹಕ್ಕೊತ್ತಾಯದ ಸಂಘವಾಗಿ (ಟ್ರೇಡ್ ಯೂನಿಯನ್) ಪರಿವರ್ತಿಸಲು, 1954ರಲ್ಲಿ ನೇಮಿತವಾಗಿದ್ದ ಅಂಗರಚನಾ ತಿದ್ದುಪಡಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಭಾರತ ಸರ್ಕಾರ ನೇಮಿಸಿದ್ದ "ಪತ್ರಕರ್ತರ ಪ್ರಥಮ ವೇತನ ಮಂಡಲಿ" ಮದ್ರಾಸಿನಲ್ಲಿ (1956) ಸಮಾವೇಶಗೊಂಡಾಗ, ರಾಜ್ಯ ಪತ್ರಕರ್ತರ ಸಂಘದ ಪರ ತ್ರಿಸದಸ್ಯ ನಿಯೋಗದಲ್ಲಿ ಒಬ್ಬರಾಗಿ ಪತ್ರಕರ್ತರ ವೇತನ ಬೇಡಿಕೆಗಳನ್ನು ಪ್ರತಿಪಾದಿಸಿದ್ದರು. ಮದ್ರಾಸ್, ಮುಂಬಯಿ, ಭೋಪಾಲ್ ಮುಂತಾದೆಡೆ ನಡೆದ ಭಾರತೀಯ ಪತ್ರಕರ್ತರ ಫೆಡರೇಷನ್ (ಐ.ಎಫ್.ಡಬ್ಲ್ಯೂ.ಜೆ) ಸಮಾವೇಶಗಳಲ್ಲಿ 'ಕೆ.ಯು.ಡಬ್ಲ್ಯೂ.ಜೆ` ಪರವಾಗಿ ಪಾಲ್ಗೊಂಡಿದ್ದರು. ಕೆಲಕಾಲ ಅಖಿಲ ಭಾರತ ವೃತ್ತಪತ್ರಿಕಾ ಸಂಪಾದಕರ ಸಮ್ಮೇಳನದ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಪತ್ರಿಕಾ ಮಾನ್ಯತಾ ಸಮಿತಿ ಹಾಗೂ ಕರ್ನಾಟಕ ಪತ್ರಿಕಾ ಅಕಾಡೆಮಿಗಳಲ್ಲಿ ಪ್ರಾತಿನಿಧ್ಯ ಪಡೆದಿದ್ದರು. ಅವರ ಸೇವೆಯನ್ನು ಗುರುತಿಸಿ ಕರ್ನಾಟಕ

ಇಷ್ಟೆಲ್ಲಾ ಹಿರಿಮೆಯ ನಮ್ಮಣ್ಣನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತಿಲ್ಲವೆಂಬ ಅನಿಸಿಕೆ ನನ್ನದಾಗಿತ್ತು. ಆದರೆ ಅಂಥದೊಂದು ನಿರಾಸೆ ಅವರನ್ನೆಂದೂ ಕಾಡಿರಲೇ ಇಲ್ಲ. ತಮ್ಮ ನೆಚ್ಚಿನ ವೃತ್ತಿ ಅವರಿಗೆ ಸಂತೃಪ್ತಿ ತಂದಿತ್ತು. ಸುದ್ದಿಪತ್ರಿಕೆಗಳಲ್ಲಿ ಕೆಲಸ ಮಾಡುವವರು ಸದಾ ಹಿನ್ನೆಲೆಯಲ್ಲಿರಬೇಕು, ಪ್ರಚಾರಕ್ಕೆ ಹಾತೊರೆಯಬಾರದೆಂದು ಬಲವಾಗಿ ನಂಬಿದ್ದರವರು. ಪತ್ರಿಕೋದ್ಯಮವನ್ನು 'ಅಕ್ಯಾಡೆಮಿಕ್` ವಲಯದಲ್ಲಿ ಕಲಿಯದಿದ್ದರೂ ಪತ್ರಿಕೆಯೊಂದನ್ನು ಅಚ್ಚುಕಟ್ಟಾಗಿ ಹೇಗೆ ನಡೆಸಬೇಕೆಂಬ ಸ್ಫಷ್ಟ ಕಲ್ಪನೆ ಅವರಿಗಿತ್ತು. ಸುದ್ದಿಗಳ ಆಯ್ಕೆಯಲ್ಲಿ, ಶಿರೋನಾಮೆ ಕೊಡುವಲ್ಲಿ, ಸೂಕ್ತವಾಗಿ 'ಸಂಪಾದನೆ` ಮಾಡುವಲ್ಲಿ ಅವರಿಗೆ ಸಾಕಷ್ಟು ಪರಿಣತಿಯಿತ್ತು. ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಉತ್ತಮ ಪ್ರಭುತ್ವ ಹೊಂದಿದ್ದ ಅವರು, ಮೂಲಕ್ಕೆ ಚ್ಯುತಿ ಬರದಂತೆ ಲೇಖನಗಳಿಗೆ ಹೊಸ ರೂಪ ನೀಡಬಲ್ಲವರಾಗಿದ್ದರು. ಹೊಸದಾಗಿ ಪತ್ರಿಕೋದ್ಯಮ ಪ್ರವೇಶಿಸುವವರಿಗೆ ಅವರು ನೀಡುತ್ತಿದ್ದ ತರಬೇತಿ ಅತ್ಯಂತ ಆತ್ಮೀಯ ಮತ್ತು ಪರಿಪೂರ್ಣವಾಗಿದ್ದವು. ಅವರೊಂದಿಗೆ ಕೆಲಸ ಮಾಡಿದ ಅನೇಕ ಪತ್ರಕರ್ತರ ನೆನಪಿನಲ್ಲಿ ಅವರು ಇಂದಿಗೂ ಚಿರಸ್ಥಾಯಿ. ಕನ್ನಡ ದೈನಿಕ ಪತ್ರಿಕಾ ರಂಗದಲ್ಲಿ ನಾಲ್ಕು ದಶಕಗಳ ಅವಿಶ್ರಾಂತ ದುಡಿಮೆಯ, ರೋಮಾಂಚಕ ಅನುಭವಗಳ, ನಿತ್ಯ ಹೋರಾಟ ಜೀವನದ, ಸಿಹಿ - ಕಹಿ ನೆನಪುಗಳು ಅವರೊಂದಿಗಿದ್ದವು. ನಿವೃತ್ತಿಯ ನಂತರ ತಮ್ಮ ಸೀಮಿತ ಮಿತ್ರವೃಂದದೊಂದಿಗೆ ಮಾತ್ರ ಸಂಪರ್ಕ ಹೊಂದಿದ್ದರು. ಪತ್ರಿಕೆಗಳ ಓದಿನೊಂದಿಗೆ ದಿನದ ಬಹುಕಾಲ ಕಳೆಯುತ್ತಿದ್ದರು. ಹೆಚ್ಚೂ-ಕಮ್ಮಿ ಅವುಗಳೊಂದಿಗೇ ಜೀವಿಸುತ್ತಿದ್ದರು. ಕಳೆದ ತಿಂಗಳಷ್ಟೇ `ವಿನೋದ' ಹಾಸ್ಯ ಪತ್ರಿಕೆಯ ಸ್ವಾತಂತ್ರ್ಯೋತ್ಸವ ಸಂಚಿಕೆಗೆ ಲೇಖನ ಕಳುಹಿಸಿದ್ದರು. ಅವರು ಸಾಯುವ ಹಿಂದಿನ ರಾತ್ರಿ `ಮಿಗ್ ವಿಮಾನಗಳ ಅಪಘಾತ, ವಿಮಾನ ವಿಜ್ಝ್ನ್ಯಾನದಲ್ಲಿ ದೇಶದ ಮುನ್ನಡೆ .....' ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಕೊನೆಗೆ `ವಿಜಯ ಕರ್ನಾಟಕ'ದಲ್ಲಿನ ನನ್ನ ಸೋಮವಾರದ ಅಂಕಣಕ್ಕೆ ಲೇಖನ ಕಳುಹಿಸಿದ್ದಾಯಿತೆ? ಎಂದು ಪ್ರಶ್ನಿಸಿದ್ದರು. `ಸಂಪಾದಕರುಗಳ ಕಷ್ಟ ನಿನಗರ್ಥವಾಗುವುದಿಲ್ಲ. ಬೇಗ ಕಳುಹಿಸಿಬಿಡು' ಎಂದು ನೆನಪಿಸಿದ್ದರು. ತಮ್ಮನ್ನು ತಾವೇ ರೂಪಿಸಿಕೊಂಡ ನಮ್ಮಣ್ಣ, ಇಡೀ ಜೀವನವನ್ನು ಪತ್ರಿಕೋದ್ಯಮಕ್ಕೆ ಮುಡಿಪಾಗಿಟ್ಟಿದ್ದರು. ಅಪ್ಪಟ ಸ್ವಾಭಿಮಾನಿ ಮತ್ತು ಸ್ವಾವಲಂಬಿಯಾಗಿದ್ದ ನಮ್ಮಣ್ಣ ಆರೋಗ್ಯವಂತರಾಗಿದ್ದರು. ಆಗಸ್ಟ್ ಮೂರರ ಮುಂಜಾನೆ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾರೆಂಬ ಕಲ್ಪನೆ ನಮಗಷ್ಟೇ ಅಲ್ಲ, ಅವರಿಗೂ ಇರಲಿಲ್ಲ. ಈ ಅನಿರೀಕ್ಷಿತ ಸಾವಿನಿಂದ ಸ್ವಾತಂತ್ರ್ಯೋತ್ತರ ಕನ್ನಡ ಪತ್ರಿಕೋದ್ಯಮದ ಮಹತ್ವದ ಕೊಂಡಿಯೊಂದು ಕಳಚಿ ಬಿತ್ತು. ----
No comments:
Post a Comment